3ರಿಂದ ದೇವಳಗಳಲ್ಲಿ ಶರನ್ನವರಾತ್ರಿ ಮಹೋತ್ಸವ

navarathri
Published on

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಅ.3 ರಿಂದ 13ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನವರಾತ್ರಿಯ ಪ್ರತಿದಿನ ಸಂಜೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. 12, 13 ರಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಂತೆ ಬಾಲಕೃಷ್ಣ ಆಚಾರ್ ಕಾರಿಂಜ ನೇತೃತ್ವದಲ್ಲಿ ಮಹಾಚಂಡಿಯಾಗ ನಡೆಯುವುದು.

ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ

ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಶ್ರೀ ಪಾರ್ವತಿ ಸನ್ನಿಧಿಯಲ್ಲಿ 3 ರಿಂದ 12ರ ವರೆಗೆ ಪ್ರತಿದಿನ ರಾತ್ರಿ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ. ನವರಾತ್ರಿ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಹೂವಿನ ಪೂಜೆ ಹಾಗೂ ಇತರ ಸೇವೆ ನಡೆಯಲಿದೆ.

ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ

ಬಂಟ್ವಾಳ ತಾಲೂಕಿನ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಮಹಾನವರಾತ್ರಿ ಪೂಜೆ 3 ರಿಂದ 11ರವರೆಗೆ ಜರುಗಲಿದೆ. ಪ್ರತಿದಿನ ರಾತ್ರಿ 7ಕ್ಕೆ ಮಹಾಪೂಜೆ ರಾತ್ರಿ 8ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.

ಪಡ್ಪು ಶ್ರೀ ಮಹಾಕಾಳಿ ದೇವಸ್ಥಾನ

ಸಜೀಪಮುನ್ನೂರು ಗ್ರಾಮದ ಪಡ್ಪು ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ 3ರಿಂದ 11ರವರೆಗೆ ಶರನ್ನವರಾತ್ರಿ ಪೂಜಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ನವರಾತ್ರಿ ಪ್ರಯುಕ್ತ ಪ್ರತಿದಿನ ಶ್ರೀ ಲಲಿತ ಸಹಸ್ರನಾಮ ಅರ್ಚನೆ, ಶ್ರೀ ಸಪ್ತಶತಿ ಪಾರಾಯಣ, ಪ್ರಸನ್ನ ಪೂಜೆ, ಕಲ್ಪೊಕ್ತಪೂಜೆ ಮಹಾಮಂಗಳಾರತಿ, ರಂಗ ಪೂಜೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net