

ಹುಬ್ಬಳ್ಳಿ: ಇಲ್ಲಿನ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಅ. 14ರಿಂದ 24ರವರೆಗೆ ಶರನ್ನವರಾತ್ರಿ ಉತ್ಸವ ಏರ್ಪಡಿಸಲಾಗಿದೆ ಎಂದು ಆಶ್ರಮದ ಸನ್ಯಾಸಿ ಸ್ವಾಮಿ ಪ್ರೇಮರೂಪಾನಂದ ಅವರು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 14ರಂದು ಸಂಜೆ 6.30ಕ್ಕೆ ವಿದ್ಯಾನಗರದ ಶ್ರೀ ರಂಭಾಪುರಿ ಕಲ್ಯಾಣ ಮಂಟಪದಿಂದ ಕಲ್ಯಾಣನಗರದ ವಿವಿಧ ಬೀದಿಗಳಲ್ಲಿ ದೇವಿ ಮೂರ್ತಿಯ ಮೆರವಣಿಗೆ ನಡೆಯಲಿದೆ. ಶಾಸಕ ಮಹೇಶ ಟೆಂಗಿನಕಾಯಿ ಮೆರವಣಿಗೆಗೆ ಚಾಲನೆ ನೀಡುವರು ಎಂದರು.
15ರಂದು ರುದ್ರಾಭಿಷೇಕ, ಶ್ರೀ ದುರ್ಗಾ ಪ್ರತಿಷ್ಠಾಪನೆ, ಗಣಹೋಮ, ನವಗ್ರಹ ಹೋಮ, ಶ್ರೀ ದುರ್ಗಾ ಹೋಮ, ಶ್ರೀ ದುರ್ಗಾ ಸಪ್ತಶತೀ ಪಾರಾಯಣ ನಡೆಯಲಿದೆ. ಬೆಳಗ್ಗೆ 11ಕ್ಕೆ ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಶ್ರೀರಂಗಪಟ್ಟಣದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಗದಾಧರಾನಂದ ಮಹಾರಾಜ, ಕಾರವಾರ ಆಶ್ರಮದ ಶ್ರೀ ಸ್ವಾಮಿ ಬುದ್ಧಿಯೋಗಾನಂದ ಮಹಾರಾಜ ಉಪಸ್ಥಿತರುವರು ಎಂದರು.
16ರಂದು ಬೆಳಗ್ಗಗೆ 10ಕ್ಕೆ ಯುವ ಸಮ್ಮೇಳನ ನಡೆಯಲಿದ್ದು, ಕೆಎಲ್ಇ ತಾಂತ್ರಿಕ ವಿವಿಯ ಸಹ ಪ್ರಾಧ್ಯಾಪಕ ಡಾ. ವಿನಾಯಕ ಕುಲಕರ್ಣಿ, ವಾಗ್ಮಿ ಆದರ್ಶ ಗೋಖಲೆ ಉಪನ್ಯಾಸ ನೀಡುವರು. ಸಂಜೆ 6ಕ್ಕೆ ಭಕ್ತಿ ಸಂಗೀತ, ತೊಗಲು ಗೊಂಬೆಯಾಟ ಜರುಗಲಿದೆ. 17ರಂದು ಬೆಳಗ್ಗೆ 10ಕ್ಕೆ ಕಲಾವಿದೆ ಶಶಿಕಲಾ ದಾನಿ ಅವರಿಂದ ಜಲತರಂಗ ವಾದನ, ಮಂಜುಶ್ರೀ ಮುಗಳಿ ಅವರಿಂದ ಭಕ್ತಿ ಸಂಗೀತ, ಯೋಗಗುರು ವಿನಾಯಕ ತಲಗೇರಿ ಅವರಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಸಂಜೆ 6.30ಕ್ಕೆ ಭಕ್ತ ಕುಂಬಾರ ನೃತ್ಯ ರೂಪಕ ನಡೆಯಲಿದೆ ಎಂದರು.
18ರಂದು ಸಂಜೆ 7ಕ್ಕೆ ಪರಿಸರ ತಜ್ಞ ಶಿವಾನಂದ ಕಳವೆ ಅವರ ಉಪನ್ಯಾಸ ಕಾರ್ಯಕ್ರಮವಿದೆ. 19ರಂದು ಬೆಳಗ್ಗೆ 10ಕ್ಕೆ 1008 ಸುಮಂಗಲೆಯರಿಂದ ಶ್ರೀ ಲಲಿತಾ ಕುಂಕುಮಾರ್ಚನೆ, ಲಲಿತಾ ಹೋಮ ನಡೆಯಲಿದೆ. ಶ್ರೀ ಮಾತಾ ತೇಜೋಮಯಿ ಸಾನ್ನಿಧ್ಯ ವಹಿಸುವರು. 10.50ಕ್ಕೆ ವಾಗ್ಮಿ ಅಕ್ಷಯಾ ಗೋಖಲೆ ಅವರು ಉಪನ್ಯಾಸ ನೀಡುವರು. 20ರಂದು ಸಂಜೆ 6ಕ್ಕೆ ಗಾನಯೋಗಿ ಶ್ರೀ ಪಂ. ಪುಟ್ಟರಾಜ ಗವಾಯಿಗಳ ಮಹಾತ್ಮೆ ನಾಟಕ, 21ರಂದು ಬೆಳಗ್ಗೆ 10.50ಕ್ಕೆ ಉದ್ಯಮಿ ವಿಲಾಸಕುಮಾರ ದೇಸಾಯಿ ಅವರಿಂದ ಉಪನ್ಯಾಸ, ಡಾ. ಸತ್ಯಮೂರ್ತಿ ಆಚಾರ್ಯರು ಅಖಂಡ ಭಾಗವತ ಪ್ರವಚನ ಮಾಲಿಕೆ ನೀಡುವರು ಎಂದರು.
22ರಂದು ಬೆಳಗ್ಗೆ 11.45ಕ್ಕೆ ಪುಷ್ಪಾಂಜಲಿ, ಸುಹಾಸಿನಿಯರ ಪೂಜೆ, ಕುಮಾರಿ ಪೂಜೆ ನೆರವೇರಲಿದೆ. ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 23ರಂದು ಬೆಳಗ್ಗೆ 10ಕ್ಕೆ ಡಾ. ಅಯ್ಯಪ್ಪಯ್ಯ ಹಲಗಲಿಮಠ ಅಖಂಡ ಶಾಸ್ತ್ರೀಯ ಸಂಗೀತ ನೀಡುವರು. ವಿದುಷಿ ಸುಜಾತ ಗುರವ, ಡಾ. ವೀಣಾ ಬಡಿಗೇರ, ಭಾಗ್ಯಶ್ರೀ ಹೂಗಾರ, ಕೋಮಲ ನಾಡಿಗೇರ, ಡಾ. ಗುರುಬಸವ ಮಹಾಮನೆ ಇತರರು ಸಂಗೀತ ಸುಧೆ ಹರಿಸುವರು. ಸಂಜೆ 7ಕ್ಕೆ ಶ್ರೀ ಸ್ವಾಮಿ ಪ್ರಕಾಶಾನಂದ ಮಹಾರಾಜ ಪ್ರವಚನ ನೀಡುವರು ಎಂದರು.
24ರಂದು ಬೆಳಗ್ಗೆ 10ಕ್ಕೆ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ಶ್ರೀ ದುರ್ಗಾ ಮಾತೆಯ ಮೆರವಣಿಗೆ ಹಾಗೂ ಉಣಕಲ್ ಕೆರೆಯಲ್ಲಿ ವಿಸರ್ಜನೆ ನಡೆಯಲಿದೆ. ವಿದ್ವಾನ್ ಶ್ರೀ ಸತ್ಯನಾರಾಯಣ ಜೋಶಿ ಅವರು ಹೋಮ, ಪಂ. ಡಾ. ಸತ್ಯಮೂರ್ತಿ ಆಚಾರ್ಯ ಅವರು ಪ್ರವಚನ ನೀಡುವರು ಎಂದರು.
ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಡಾ.ಎಂ.ಎ. ಸುಬ್ರಹ್ಮಣ್ಯ, ಆಶ್ರಮದ ಧರ್ಮದರ್ಶಿ ಸಂಭಾಜಿ ಕಲಾಲ, ನಾಗಲಿಂಗ ಮುರಗಿ, ನಿವೃತ್ತ ಗ್ರಂಥಪಾಲಕ ಡಾ.ಬಿ.ಎಸ್. ಮಾಳವಾಡ ಸುದ್ದಿಗೋಷ್ಠಿಯಲ್ಲಿದ್ದರು.