ಶನಿ ಮಹಾತ್ಮೆ ನಾಟಕದ ಟೀಸರ್ ಬಿಡುಗಡೆ

mng-8oct-shrilalite
Published on


ಮಂಗಳೂರು : ಶ್ರೀ ಲಲಿತೆ ಕಲಾವಿದರು ಮಂಗಳೂರು ಇದರ ನೂತನ ಕಲಾಕೃತಿ ಶನಿ ಮಹಾತ್ಮೆ ತುಳು ಮಕನ್ನಡ ಪೌರಾಣಿಕ ನಾಟಕದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ನಗರದ ಕದ್ರಿ ಮಲ್ಲಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಟೀಸರ್ ಬಿಡುಗಡೆಗೊಳಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ , ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ‘
ಶ್ರೀ ಲಲಿತೆ ಕಲಾವಿದರು ಕಟೀಲ್ದಪ್ಪೆ, ಗರುಡ ಪಂಚಮಿಯಂತಹ ಪೌರಾಣಿಕ, ಚಾರಿತ್ರಿಕ ನಾಟಕಗಳನ್ನು ಪ್ರದರ್ಶಿವ ಮೂಲಕ
ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ಪೌರಾಣಿಕ ನಾಟಕಗಳಿಂದ ಪ್ರೇಕ್ಷಕರಿಗೆ ಭಕ್ತಿಯ ಸಂದೇಶ ತಿಳಿಸಲು
ಸಾಧ್ಯವಾಗುತ್ತದೆ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ ಪೋಸ್ಟರ್ ಬಿಡುಗಡೆಗೊಳಿಸಿದರು.
ಶನಿ ಮಹಾತ್ಮೆ ನಾಟಕದ ರಚನೆಕಾರ ಕದ್ರಿ ನವನೀತ ಶೆಟ್ಟಿ ,ನಿರ್ದೇಶಕ ಜೀವನ್ ಉಳ್ಳಾಲ್, ತಂಡದ ವ್ಯವಸ್ಥಾಪಕ ಕಿಶೋರ್.ಡಿ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಮೋಹನ್ ಕೊಪ್ಪಳ ಉಪಸ್ಥಿತರಿದ್ದರು. ಶನಿ ಮಹಾತ್ಮೆ ಪೌರಾಣಿಕ ನಾಟಕ ಪ್ರಥಮವಾಗಿ ನ.10ರಂದು ಸಾಯಂಕಾಲ
4.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯುವ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮದಲ್ಲಿ ಉಚಿತ ಪ್ರದರ್ಶನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net