

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಡೆರಿಲ್ ಮಿಚೆಲ್ ಶತಕದ ಫಲವಾಗಿ ಭಾರತಕ್ಕೆ 274ರನ್ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಡೆರಿಲ್ ಮಿಚೆಲ್ (130 ರನ್, 127 ಎಸೆತ, 9 ಬೌಂಡರಿ, 5 ಸಿಕ್ಸರ್), ರಚಿನ್ ರವೀಂದ್ರ (75 ರನ್, 87 ಎಸೆತ, 6 ಬೌಂಡರಿ, 1 ಸಿಕ್ಸರ್) 159 ರನ್ಗಳ ಜತೆಯಾಟದ ಫಲವಾಗಿ 50 ಓವರ್ಗಳಲ್ಲಿ 273 ರನ್ಗಳಿಗೆ ಆಲೌಟ್ ಆಯಿತು.
ಭಾರತದ ಪರ ಮೊಹಮ್ಮದ್ ಶಮಿ (10-054-5), ಮೊಹಮ್ಮದ್ ಸಿರಾಜ್ (10-1-45-1), ಜಸ್ಪ್ರೀತ್ ಬುಮ್ರಾ (10-1-45-1), ಕುಲ್ದೀಪ್ ಯಾದವ್ (10-0-73-2), ರವೀಂದ್ರ ಜಡೇಜಾ (10-0-48-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಗಾಯಾಳು ಹಾರ್ದಿಕ್ ಪಾಂಡ್ಯ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ವೇಗಿ ಮೊಹಮ್ಮದ್ ಶಮಿ 5 ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡಕ್ಕೆ ಕಡಿವಾನ ಹೇರಿದ್ದಾರೆ. ವೇಗಿ ಶಾರ್ದೂಲ್ ಠಾಕೂರ್ ಬದಲಿಗೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ಗೆ ಅವಕಾಶ ನೀಡಲಾಗಿದೆ.