ಶಕ್ತಿ ಯೋಜನೆ | ಮೊಬೈಲ್​ನಲ್ಲಿ ದಾಖಲೆ ಕೊಟ್ಟರೂ ಉಚಿತ ಪ್ರಯಾಣಕ್ಕೆ ಅವಕಾಶ

Hook for free travel in inter-state buses
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಶಕ್ತಿ ಯೋಜನೆ ಭಾಗವಾಗಿ ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ರಾಜ್ಯದ ಮಹಿಳೆಯರು ಸರ್ಕಾರ ಮಾನ್ಯ ಮಾಡಿರುವ ಗುರುತಿನ ಚೀಟಿಯನ್ನು ಮೊಬೈಲ್​ನಲ್ಲಿ ತೋರಿಸಿದರೂ ಪರಿಗಣಿಸುವಂತೆ ಸಾರಿಗೆ ಇಲಾಖೆ ನಿರ್ವಾಹಕರಿಗೆ ಸೂಚಿಸಿದೆ.

ಕೆಲವೆಡೆ ಮಹಿಳಾ ಪ್ರಯಾಣಿಕರು ಮೊಬೈಲ್​ನಲ್ಲಿ ಗುರುತಿನ ಚೀಟಿ ತೋರಿಸಿದರೆ ನಿರ್ವಾಹಕರು ಮಾನ್ಯ ಮಾಡದಿರುವ ಬಗ್ಗೆ ಸಾಕಷ್ಟು ದೂರುಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಉಚಿತ ಪ್ರಯಾಣಕ್ಕೆ ಅಡಚಣೆಯಾಗದಂತೆ ಅವಕಾಶ ಕಲ್ಪಿಸಲು ಮಹಿಳಾ ಪ್ರಯಾಣಿಕರು ಮೊಬೈಲ್​ನಲ್ಲಿ ತೋರಿಸುವ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ಪರಿಗಣಿಸುವಂತೆ ನಿರ್ವಾಹಕರಿಗೆ ಇಲಾಖೆ ತಿಳಿಸಿದೆ.

ಈ ಬಗ್ಗೆ ದೂರುಗಳು ಸ್ವೀಕೃತಗೊಂಡಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net