

ಮುಂಬೈ: ಬಾಲಿವುಡ್ ನಟ ಶಕ್ತಿ ಕಪೂರ್(Shakti Kapoor) ಮುಂಬೈನ ಜುಹು ಪ್ರದೇಶದಲ್ಲಿರುವ ತನ್ನ ಅಪಾರ್ಟ್ಮೆಂಟ್ ಅನ್ನು 6.11 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಸ್ಕ್ವೇರ್ಯಾರ್ಡ್ಸ್ನಲ್ಲಿನ ಆಸ್ತಿ ನೋಂದಣಿ ದಾಖಲೆಗಳು ತಿಳಿಸಿವೆ.
ಈ ಅಪಾರ್ಟ್ಮೆಂಟ್ ಜುಹುವಿನ ಸಿಲ್ವರ್ ಬೀಚ್ ಹೆವೆನ್ ಕೋ-ಆಪರೇಟಿವ್ ಸೊಸೈಟಿಯಲ್ಲಿದೆ. ದಾಖಲೆಗಳ ಪ್ರಕಾರ, ಅಪಾರ್ಟ್ಮೆಂಟ್ ಮೊದಲ ಮಹಡಿಯಲ್ಲಿದ್ದು 881 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಆ ಅಪಾರ್ಟ್ಮೆಂಟ್ ಅನ್ನು ಬೆಂಗಳೂರು ಮೂಲದ ಸತೀಶ್ ವೆಂಕಟೇಶ್ ಮತ್ತು ಅರ್ಚನಾ ತನೇಜಾ ಅವರಿಗೆ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ಅಪಾರ್ಟ್ಮೆಂಟ್ ವಹಿವಾಟನ್ನು 2024 ಡಿಸೆಂಬರ್ 26ರಂದು ನೋಂದಾಯಿಸಲಾಗಿದ್ದು, 36.66 ಲಕ್ಷ ರೂ. ಮುದ್ರಾಂಕ ಶುಲ್ಕ ಮತ್ತು 30,000 ರೂ. ನೋಂದಣಿ ಶುಲ್ಕವನ್ನು ಪಾವತಿಸಲಾಗಿದೆ. ಪ್ರತಿಕ್ರಿಯೆಗಾಗಿ ಶಕ್ತಿ ಕಪೂರ್ ಮತ್ತು ಖರೀದಿದಾರರು ಇಬ್ಬರೂ ಸಂಪರ್ಕದಲ್ಲಿಲ್ಲ ಎಂದು ಹೇಳಲಾಗಿದೆ.
ಜುಹು ಮುಂಬೈನ ಪಶ್ಚಿಮ ಪ್ರದೇಶದ ಪ್ರಮುಖ ಉಪನಗರ ಪ್ರದೇಶವಾಗಿದೆ. ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅಮಿತಾಭ್ ಬಚ್ಚನ್, ವರುಣ್ ಧವನ್, ಅಜಯ್ ದೇವಗನ್, ಶಾಹಿದ್ ಕಪೂರ್ ಮತ್ತು ಕಾರ್ತಿಕ್ ಆರ್ಯನ್ ಸೇರಿದಂತೆ ಬಾಲಿವುಡ್ ತಾರೆಯರು ಮುಂಬೈನ ಜುಹು ಪ್ರದೇಶದಲ್ಲಿ ಆಸ್ತಿ ಹೊಂದಿದ್ದಾರೆ. ಈ ಪ್ರದೇಶವು ಬೀಚ್, ಉನ್ನತ ದರ್ಜೆಯ ರೆಸ್ಟೋರೆಂಟ್ಗಳು, ಅಂಧೇರಿ ಮತ್ತು ಬಾಂದ್ರಾದಂತಹ ವ್ಯಾಪಾರ ಕೇಂದ್ರಗಳ ಸಾಮೀಪ್ಯಕ್ಕೆ ಹೆಸರುವಾಸಿಯಾಗಿದೆ. ಸ್ಕ್ವೇರ್ಯಾರ್ಡ್ಸ್ ಪ್ರಕಾರ, ಇದು ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿ ಮತ್ತು ಮುಂಬೈ ಮೆಟ್ರೋ ನೆಟ್ವರ್ಕ್ನೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.
ಶಕ್ತಿ ಕಪೂರ್ ಒಬ್ಬ ಪ್ರಸಿದ್ಧ ಭಾರತೀಯ ನಟ. ಅವರು ಹಿಂದಿ ಚಿತ್ರರಂಗದಲ್ಲಿ ಖಳನಾಯಕ ಮತ್ತು ಹಾಸ್ಯ ಪಾತ್ರಗಳೆರಡರಲ್ಲೂ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ದಶಕಗಳ ವೃತ್ತಿಜೀವನದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಲನಚಿತ್ರ ವೃತ್ತಿಜೀವನದ ಜತೆಗೆ ಅವರು 2011ರಲ್ಲಿ ರಿಯಾಲಿಟಿ ಶೋ ಬಿಗ್ ಬಾಸ್ನಲ್ಲಿ ಸ್ಪರ್ಧಿಯಾಗಿದ್ದರು.(ಏಜೆನ್ಸೀಸ್)