ಮಿಯಾಮಿ(ಅಮೆರಿಕಾ): ಕೊಲಂಬಿಯನ್ ಗಾಯಕಿ ಶಕೀರಾ ಇತ್ತೀಚೆಗೆ ಮಿಯಾಮಿಯ ನೈಟ್‌ಕ್ಲಬ್‌ನಲ್ಲಿ ಹೊಸದಾಗಿ ಬಿಡುಗಡೆಯಾದ ತನ್ನ ಸಿಂಗಲ್ ಸೋಲ್ಟೆರಾಗೆ ಪ್ರದರ್ಶನ ನೀಡಿದ್ದು, ಕೆಲವು ಅಭಿಮಾನಿಗಳು ತುಂಡುಡುಗೆ ತೊಟ್ಟಿದ್ದ ಆಕೆಯ ಬಳಿ ಬಂದು ವೀಡಿಯೋ ಚಿತ್ರೀಕರಣಕ್ಕೆ ಮುಂದಾದರು. ಆಗ ತನ್ನ ಮಿನಿ ಡ್ರೆಸ್ ಅನ್ನು ಚಿತ್ರೀಕರಿಸುವುದನ್ನು ಗಮನಿಸಿದ ಆಕೆ ಕುಪಿತಗೊಂಡು ವೇದಿಕೆಯಿಂದ ಹೊರನಡೆದಳು.
ಇದನ್ನೂ ಓದಿ: ‘ಧೂಮ್- ಭಾಗ 4’ ರಲ್ಲಿ ಕಾಲಿವುಡ್ ನಟ ಸೂರ್ಯ! ಇದು ನಿಜವೇ?
ತುಂಡುಡುಗೆಯಲ್ಲಿ ಕಾಣಿಸಿಕೊಂಡ ಶಕೀರಾಬಳಿ ಬಂದ ಅಭಿಮಾನಿಗಳು ಬೆಲ್ಲಕ್ಕೆ ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಂಡರು. ಕೆಲವರು ಕಾಲು, ತೊಡೆ ಮುಟ್ಟಿ ಪ್ರೋತ್ಸಾಹಿಸಿದರು. ಇನ್ನು ಕೆಲವರು ರೊಚ್ಚಿಗೆದ್ದವರಂತ ವೀಡಿಯೋ ಚಿತ್ರೀಕರಿಸಲು ಮುಂದಾದರು. ಆಗ ಶಕೀರಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದರು. ತನ್ನ ಎದೆ, ತೊಡೆಗಳನ್ನು ಎರಡೂ ಕೈಗಳಿಂದ ಮುಚ್ಚಿಕೊಳ್ಳಲು ಯತ್ನಿಸಿದಳು. ಆದರೆ ಅಭಿಮಾನಿಗಳು ಜಪ್ಪಯ್ಯ ಅಂದ್ರೂ ಹಿಂದೆ ಸರಿಯಲಿಲ್ಲ. ಕಡೆಗೆ ರೆಕಾರ್ಡಿಂಗ್ ನಿಲ್ಲಿಸುವಂತೆ ಅಭಿಮಾನಿಗಳನ್ನು ಪದೇ ಪದೇ ಕೇಳಿಕೊಳ್ಳುತ್ತಿದ್ದಳು. ಆದರೆ, ಅಭಿಮಾನಿಗಳು ವೀಡಿಯೋ ಮಾಡುವುದನ್ನು ನಿಲ್ಲಿಸಲಿಲ್ಲ.
@shakira 👍 pic.twitter.com/TbmdgwVI8c
— ADALBERTO LLINAS ®️ (@AdalbertoLlinas) September 15, 2024
ಕೊನೆಗೆ ಬೇಸತ್ತ ಶಕೀರಾ ಡ್ಯಾನ್ಸ್ ನಿಲ್ಲಿಸಿದಳು. ತನ್ನ ಮಾನ ಕಾಪಾಡಿಕೊಳ್ಳಲು ಪ್ರಯತ್ನಿಸಿದಳು, ಆದರೆ ಇದಾವುದೂ ವರ್ಕೌಟ್ ಆಗದಿದ್ದಾಗ ಅಂತಿಮವಾಗಿ ಆಕೆ ವೇದಿಕೆಯಿಂದ ಹೊರ ನಡೆದಳು.