More

    ಈ ವರ್ಷ ರಂಜಿಸಲು ಬರ್ತಿದ್ದಾರೆ ‘ಕಿಂಗ್​ ಖಾನ್​’

    ಮುಂಬೈ: ಬಾಲಿವುಡ್​ನ ಬಾದ್​ಷಾ ಶಾರುಖ್ ಖಾನ್ 2021 ರಲ್ಲಿ ದೊಡ್ಡ ತೆರೆಯ ಮೇಲೆ ಕಾಣಿಸಿಕೊಳ್ಳುವುದಾಗಿ ಹೇಳಿ ತಮ್ಮ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಇದರಿಂದಾಗಿ ಅವರ ಬಹು ಅಪೇಕ್ಷೆಯ ಚಿತ್ರ `ಪಠಾಣ್​’ ಈ ವರ್ಷ ತೆರೆಕಾಣುವ ಸಾಧ್ಯತೆಗೆ ಮತ್ತಷ್ಟು ಇಂಬು ಸಿಕ್ಕಿದೆ.

    ಶಾರುಖ್ ಈ ಬಗ್ಗೆ ತಮ್ಮ ಟ್ಟಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವೀಡಿಯೋ ತುಣುಕಿನಲ್ಲಿ ಮಾತಾಡಿದ್ದಾರೆ. ಹೊಸ ವರ್ಷಕ್ಕೆ ಶುಭಾಶಯ ಕೋರಿ ಮಾತನಾಡಿರುವ 3 ನಿಮಿಷ 15 ಸೆಕೆಂಡುಗಳ ವೀಡಿಯೋದ ಕೊನೆಯಲ್ಲಿ ಶಾರುಖ್, `ಸೀ ಯು ಆಲ್ ಆನ್ ದ ಬಿಗ್ ಸ್ಕ್ರೀನ್ ಇನ್​ 2021′ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಚಿತ್ರೀಕರಣವೂ ಮುಗೀತು; ಇದೀಗ ಟೀಸರ್​ ಸಹ ಬಿಡುಗಡೆಯಾಯ್ತು …

    ವೀಡಿಯೋದಲ್ಲಿ `ರಿಯಲ್ ಫನ್ ಈಸ್ ವಿತ್ ರಿಯಲ್ ಪೀಪಲ್’ ಎಂದು 2020 ನಮಗೆ ಕಲಿಸಿದೆ ಎಂದಿದ್ದಾರೆ ಶಾರುಖ್. ನೈಟ್ ಸೂಟ್​​ನಲ್ಲಿ ಕುರ್ಚಿಯ ಮೇಲೆ ಕೂತು ತಮ್ಮ ಅಭಿಮಾನಿಗಳೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದ್ದಾರೆ.

    ತಮ್ಮ 2018 ರ `ಜೀರೋ’ ಚಿತ್ರ ಬಾಕ್ಸ್ ಆಫೀಸಿನಲ್ಲಿ ಫ್ಲಾಪ್ ಆದ ನಂತರ `ಕಿಂಗ್ ಖಾನ್’ ದೊಡ್ಡ ತೆರೆಯ ಮೇಲೆ ಕಾಣಿಸಿಕೊಂಡೇ ಇಲ್ಲ. ಇದೀಗ ಎರಡು ವರ್ಷಗಳ ಅಂತರ ನೀಡಿ ‘ಪಠಾಣ್​’ ಚಿತ್ರದ ನಾಯಕನ ಪಾತ್ರ ಸ್ವೀಕರಿಸಿದ್ದಾರೆ. ಯಶ್​ರಾಜ್ ಫಿಲಂಸ್​ನ ನಿರ್ಮಾಣದಲ್ಲಿ ಸಿದ್ಧಾರ್ಥ್​ ಆನಂದ್ ನಿರ್ದೇಶಿಸುತ್ತಿರುವ ಈ ಚಿತ್ರವು ಈಗಾಗಲೇ ತನ್ನ ದೊಡ್ಡ ಬಜೆಟ್​ನಿಂದಾಗಿ ಎಲ್ಲರ ಗಮನ ಸೆಳೆದಿದೆ.

    ಇದನ್ನೂ ಓದಿ: ‘ಸಲಾರ್​’ ಚಿತ್ರತಂಡಕ್ಕೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ …

    ಪಠಾಣ್​ ಚಿತ್ರದಲ್ಲಿ ಶಾರುಖ್ ಜೊತೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್-ದೀಪಿಕಾ ಜೋಡಿ ಈಗಾಗಲೇ ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್‌ಪ್ರೆಸ್‌’, ‘ಹ್ಯಾಪಿ ನ್ಯೂ ಇಯರ್’ನಂತಹ ಹಿಟ್ ಚಿತ್ರಗಳನ್ನು ನೀಡಿ ಅಭಿಮಾನಿಗಳನ್ನು ರಂಜಿಸಿದೆ.

    ಶಾರುಖ್ ಇನ್ನೆರಡು ಚಿತ್ರಗಳಿಗೂ ಕಾಲ್​ಶೀಟ್ ಕೊಟ್ಟಿದ್ದಾರೆ ಎಂದು ಸುದ್ದಿ. ರಾಜ್‌ಕುಮಾರ್ ಹಿರಾನಿಯೊಂದಿಗೆ ಒಂದು, ತಮಿಳು ನಿರ್ದೇಶಕ ಅಟ್ಲೀ ಕುಮಾರ್‌ರೊಂದಿಗೆ ಮತ್ತೊಂದು ಚಿತ್ರ ಸರತಿಯಲ್ಲಿವೆ.

    ಇಂಗ್ಲೀಷ್​ ಮೇಷ್ಟ್ರು ಗೋಪಿಯಾಗಿ ಬಂದ್ರು ದಾನಿಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts