

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್(Shahid Kapoor) ಆದಷ್ಟು ತನ್ನ ಸಮಯವನ್ನು ಕುಟುಂಬದೊಂದಿಗೆ ಕಳೆಯಲು ಪ್ರಯತ್ನಿಸುತ್ತಾರೆ. ಅವರ ಮಕ್ಕಳು ಮತ್ತು ಮೀರಾಳಿಗೆ ಪೂರ್ಣ ಸಮಯವನ್ನು ನೀಡುತ್ತಾರೆ. ಅದಕ್ಕಾಗಿಯೇ ಅವರನ್ನು ಅತ್ಯುತ್ತಮ ಪತಿ ಮತ್ತು ಅತ್ಯುತ್ತಮ ತಂದೆ ಎಂದು ಹೇಳಲಾಗುತ್ತದೆ. ಶಾಹಿದ್ ಮಕ್ಕಳ ಹೆಚ್ಚಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಾರೆ. ಅದರ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಲದ್ಲಿ ಹಂಚಿಕೋಂಡಿದ್ದಾರೆ. ಅದಕ್ಕೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ವಿಡಿಯೋದಲ್ಲಿ ಶಾಹಿದ್ ಕಪೂರ್ ತಮ್ಮ ಮಗ ಝೈನ್ಗೆ ಸೈಕಲ್ ಓಡಿಸುವುದನ್ನು ಕಲಿಸುತ್ತಿರುವುದನ್ನು ನೋಡಬಹುದು. ಇದು ತುಂಬಾ ಮುದ್ದಾಗಿದ್ದು, ಅದರ ಬಗ್ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅದಲ್ಲಿ ಶಾಹಿದ್ ಕಪೂರ್ ಅವರ ಸಹೋದರ ಇಶಾನ್ ಖಟ್ಟರ್ ಅವರ ತಮಾಷೆಯ ಕಾಮೆಂಟ್ ಕೂಡ ಇದೆ.
ವಿಡಿಯೋದಲ್ಲಿ ಶಾಹಿದ್ ಝೈನ್ಗೆ ಸೈಕಲ್ ಸವಾರಿ ಮಾಡುವುದನ್ನು ಬಹಳ ವಿಶಿಷ್ಟ ರೀತಿಯಲ್ಲಿ ಕಲಿಸುತ್ತಿದ್ದಾರೆ. ಝೈನ್ಗೆ ಸೈಕಲ್ ಕಲಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಾಗ ಶಾಹಿದ್, ನಿಮ್ಮ ಮಗನಿಗೆ ಟವೆಲ್ ಹಿಡಿದು ಸೈಕಲ್ ಕಲಿಸುವುದಕ್ಕಿಂತ ಉತ್ತಮ ಸಲಹೆ ಇದೆಯೇ? ಎಂದು ಬರೆದಿದ್ದಾರೆ. ಶಾಹಿದ್ ಝೈನ್ ಹೆಗಲ ಬಳಿ ಟವಲ್ ಅನ್ನು ಹಿಂದಿನಿಂದ ಹಿಡಿದುಕೊಂಡು ಸೈಕಲ್ ಸವಾರಿ ಮಾಡುವುದನ್ನು ಹೇಲಿಕೊಡುತ್ತಿದ್ದಾರೆ. ಶಾಹಿದ್ ತನ್ನ ಸಮತೋಲನವನ್ನು ಕಳೆದುಕೊಂಡಾಗ ಅವನು ಅದನ್ನು ಟವಲ್ ಸಹಾಯದಿಂದ ಸರಿಪಡಿಸುವುದನ್ನು ನೋಡಬಹುದು.
ಅಂಕಲ್, ಸಹಾಯವಾಣಿ ಸಂಖ್ಯೆಗೆ ಡಯಲ್ ಮಾಡಿ ಎಂದು ಇಶಾನ್ ಪ್ರತಿಕ್ರಿಯಿಸಿದ್ದಾರೆ. ರಸ್ತೆಯಲ್ಲಿ ಆಡುವ ಹುಡುಗರೊಂದಿಗೆ ಬಿಡಿ ಅವನೇ ಕಲಿತುಕೊಳ್ಳುತ್ತಾನೆ, ಹಿಂದಿನ ಸೀಟಿನಿಂದ ಬೈಸಿಕಲ್ ಅನ್ನು ಬಿಗಿಯಾಗಿ ಹಿಡಿದುಕೊಳ್ಳಿ, ಆಸಕ್ತಿದಾಯಕ, ಶಾಹಿದ್ ಈ ಸೈಕಲ್ಗೆ ಪಾಲಕ ಚಕ್ರವನ್ನು ಅಳವಡಿಸಿ ಹಿಂದಿನಿಂದ ಅವನನ್ನು ಬೆಂಬಲಿಸಿ ಆಗ ಕಲಿಯುತ್ತಾನೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಶಾಹಿದ್ ಕಪೂರ್ ಕೊನೆಯದಾಗಿ ಜನವರಿ 31ರಂದು ಬಿಡುಗಡೆಯಾದ 'ದೇವಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈಗ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ದೇವಾ ಚಿತ್ರದಲ್ಲಿ ಶಾಹಿದ್ ಜತೆ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.(ಏಜೆನ್ಸೀಸ್)