Shahid Afridi | ಪಾಕ್​​ನ ಪ್ರಥಮ ದರ್ಜೆ ಕ್ರಿಕೆಟ್​​ ಮೂರನೇ ದರ್ಜೆಗಿಳಿದಿದೆ ಎಂದು ಟೀಕಿಸಿದ ಮಾಜಿ ನಾಯಕ ಶಾಹಿದ್ ಅಫ್ರಿದಿ!

Shahid Afridi
Published on

Shahid Afridi: ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿನ ಅವ್ಯವಸ್ಥೆಯನ್ನು ಟೀಕಿಸಿರುವದ ಮಾಜಿ ನಾಯಕ ಶಾಹಿದ್ ಅಫ್ರಿದಿ, ದೇಶದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನ ಗುಣಮಟ್ಟ ಮೂರನೇ ದರ್ಜೆಗಿಳಿದಿದೆ, ಪ್ರಥಮ ದರ್ಜೆ ಕ್ರಿಕೆಟಿಗರ ಮೇಲೆ ಹೆಚ್ಚಿನ ಹೂಡಿಕೆ ಮಾಡುವಂತೆ ಪಿಸಿಬಿಯನ್ನು ಅನೇಕ ವರ್ಷಗಳಿಂದ ಒತ್ತಾಯಿಸಲಾಗುತ್ತಿದೆಯಾದರೂ ಏನು ಪ್ರಯೋಜನವಾಗುತ್ತಿಲ್ಲ ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಕ್ರಿಕೆಟ್​​ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕು, ಆಟಗಾರರ ಮೇಲೆ ಹೆಚ್ಚು ಹಣ ಹೂಡಿಕೆ ಮಾಡಬೇಕು, ಅರ್ಹ ತರಬೇತುದಾರರನ್ನು ತರಬೇಕು ಮತ್ತು ಆಟಗಾರರು ಕೂಡ ಆಟದ ಬೇಡಿಕೆಗಳನ್ನು ನಿಭಾಯಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು, ಪಿಸಿಬಿಯನ್ನು ಹೀಗೆ ಮಾಡುವಂತೆ ಪದೇ ಪದೇ ಕೇಳುವುದರಲ್ಲಿ ನನಗೆ ಬೇಸರವಾಗುತ್ತದೆ, ಆದರೂ ನಾನು ಮತ್ತೊಮ್ಮೆ ವಿನಂತಿಸುತ್ತಿದ್ದೇನೆ. ದಯವಿಟ್ಟು ದೇಶೀಯ ಕ್ರಿಕೆಟ್‌ನತ್ತ ಗಮನಹರಿಸಿ. ಪಾಕಿಸ್ತಾನಕ್ಕೆ ಒಂದು ಉಪಕಾರ ಮಾಡಿ ಎಂದು ಗೋಗರೆದರು.

ಭಾನುವಾರ ನಡೆದ ಭಾರತ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಪಾಕಿಸ್ತಾನ ತಂಡದ , ತನ್ನ ಸ್ವಂತ ಅಳಿಯ ಶಾಹಿನ್​ರನ್ನು ಟೀಕಿಸಿದ್ದಾರೆ. ಶಾಹೀನ್ ತಂಡದ ಪರ ಉಪಯುಕ್ತ ರನ್ ಗಳಿಸಿದರು, ಇದು ಪಾಕ್​​ ತಂಡ 100 ರನ್‌ಗಳ ಗಡಿ ದಾಟಲು ನೆರವಾಯಿತು. ಆದರೆ ನನಗೆ ಶಾಹೀನ್‌ನಿಂದ ರನ್‌ ಅವಶ್ಯಕತೆ ಇರಲಿಲ್ಲ, ಅವನು ಹೊಸ ಚೆಂಡನ್ನು ಸ್ವಿಂಗ್ ಮಾಡುವುದು ಮತ್ತು ವಿಕೆಟ್​​ ಪಡೆಯುವುದರ ಮೇಲೆ ಗಮನಹರಿಸಬೇಕು ಎಂದರು. ಇದೇ ವೇಳೆ ಭಾರತ ತಂಡದ ಮೂರೂ ವಿಕೆಟ್​​ ಕಬಳಿಸಿದ ಸ್ಯಾಮ್ ಅಯೂಬ್‌ನಿಂದ ಬೌಲಿಂಗ್ ಬಗ್ಗೆಯೂ ನಿರಾಸಕ್ತಿ ತೋರಿರುವ ಅವರು, ಅಯೂಬ್​​ ಬ್ಯಾಟಿಂಗ್​​ ಬಗ್ಗೆ ಗಮನಹರಿಸಬೇಕು ಎಂದರು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net