

ಮೂಲ್ಕಿ: ಇನ್‌ಸ್ಟಗ್ರಾಂ ಮೂಲಕ ಪರಿಚಯವಾದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರು ಯುವಕರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಬಡಗುಬೆಟ್ಟು ನಿವಾಸಿ ಬಸ್ ನಿರ್ವಾಹಕ ದೀಪಕ್(19) ಮತ್ತು ಆತನ ಸ್ನೇಹಿತ ಅತ್ರಾಡಿ ಪರ್ಕಳ ಭಟ್ರಪಲ್ಕೆ ನಿವಾಸಿ ನವೀನ್ ಶೆಟ್ಟಿ(21) ಆರೋಪಿಗಳು.
ಆರೋಪಿಗಳು ಬಾಲಕಿಯನ್ನು ಜುಲೈ 19ರಂದು ಬಪ್ಪನಾಡು ಬಳಿಯಿಂದ ಸ್ಕೂಟರ್‌ನಲ್ಲಿ ಅಪಹರಿಸಿಕೊಂಡು ಉಡುಪಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಆರೋಪಿಗಳ ವಿರುದ್ಧ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.