ಕಾನ್‌ಸ್ಟೆಬಲ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್

Child Rape New
Published on

ಹುಬ್ಬಳ್ಳಿ: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೊಲೀಸ್ ಕಾನ್‌ಸ್ಟೆಬಲ್ ಹಜರತ್ ಅಲಿ ಮಿಟ್ಟೇಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಬಾಲಕಿಯೊಂದಿಗೆ ಕಾನ್‌ಸ್ಟೆಬಲ್ ಅಸಭ್ಯವಾಗಿ ವರ್ತಿಸಿ ಹಿಂಸೆ ನೀಡಿದ್ದಾನೆ ಎಂದು ಆಕೆಯ ತಂದೆ ದೂರು ನೀಡಿದ್ದಾರೆ. ಬಾಲಕಿಯ ಹೇಳಿಕೆ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯ ತಂದೆ ಹಾಗೂ ತಾಯಿ ನಡುವೆ ಕೆಲ ವಿಚಾರಕ್ಕಾಗಿ ಜಗಳವಾಗಿ, 112ಗೆ ಕರೆ ಮಾಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಕಾನ್‌ಸ್ಟೆಬಲ್ ದೂರುದಾರರ ಪತ್ನಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ನಂತರ ಆಕೆಯ ಸ್ನೇಹ ಬೆಳೆಸಿ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ ಮಹಿಳೆ ಪ್ರತ್ಯೇಕ ಮನೆ ಮಾಡಿ ವಾಸಿಸುತ್ತಿದ್ದಳು. ವಿಚ್ಛೇದನ ಕೋರಿರುವುದನ್ನು ಜಮಾತದಲ್ಲಿ ತಿಳಿಸಿದ್ದಳು ಎಂದು ಬಾಲಕಿಯ ತಂದೆ ಆರೋಪಿಸಿದ್ದಾನೆ.

ಈ ನಡುವೆ ಮಹಿಳೆಯ ಮನೆಗೆ ಬರುತ್ತಿದ್ದ ಕಾನ್‌ಸ್ಟೆಬಲ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಂಟಿಕೇರಿ ಪೊಲೀಸ್ ಠಾಣೆಗೆ ಪ್ರಕರಣದ ತನಿಖೆ ವರ್ಗಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net