ಕೇಂದ್ರದ ಮಾಜಿ ಸಚಿವರೊಬ್ಬರ ಲೈಂಗಿಕ ಪ್ರಕರಣದ ವಿಡಿಯೋ ವೈರಲ್​!

Sexual harassement
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಇತ್ತೀಚೆಗೆ ರಾಜ್ಯದ ಮಾಜಿ ಸಚಿವರೊಬ್ಬರ ಅಶ್ಲೀಲ ಸಿಡಿ ಪ್ರಕರಣ ಸಂಚಲನ ಸೃಷ್ಟಿಸಿದ್ದು ಜನಮಾನಸದಲ್ಲಿನ್ನೂ ನೆನಪಿನಲ್ಲಿ ಇರುವಾಗಲೇ ಮತ್ತೊಬ್ಬ ರಾಜಕಾರಣಿಯ ಕಾಮವಾಂಛೆಯ ವಿಡಿಯೋ ವೈರಲ್ ಆಗಿದೆ.

ಅದರಲ್ಲೂ ಈ ಸಲ ಕೇಂದ್ರದ ಮಾಜಿ ಸಚಿವರೊಬ್ಬರು ಅದರಲ್ಲೂ ಮುಖ್ಯಮಂತ್ರಿ ಆಗಿದ್ದವರೇ ಈ ಪ್ರಕರಣದಲ್ಲಿ ಕಂಡುಬಂದಿರುವುದು ಆಡಳಿತಾರೂಢ ಪಕ್ಷಕ್ಕೆ ಮುಜುಗರ ಉಂಟು ಮಾಡುವಂತೆಯೂ ಆಗಿದೆ. ಈ ರಾಜಕಾರಣಿಯು ಯುವತಿಯೊಬ್ಬಳ ಜೊತೆ ವಿಡಿಯೋ ಕಾಲ್​ನಲ್ಲಿ ಅಸಭ್ಯವಾಗಿ ಮಾತನಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಕುರಿತ ವಿಡಿಯೋ ವೈರಲ್​ ಆಗಿದ್ದು, ವ್ಯಾಪಕ ಟೀಕೆ, ರಾಜಕೀಯ ಪಕ್ಷಗಳ ಬೆಂಬಲಿಗರಿಂದ ಕಾಲೆಳೆತ-ಸಮರ್ಥನೆಯಂಥ ಪೋಸ್ಟ್​ಗಳೂ ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ. ಇನ್ನೊಂದೆಡೆ ಇದು ಫೇಕ್​ ವಿಡಿಯೋ, ತೇಜೋವಧೆ ಮಾಡಲು ಕಿಡಿಗೇಡಿಗಳು ಸೃಷ್ಟಿಸಿದ ವಿಡಿಯೋ ಎನ್ನುವ ವಾದಗಳೂ ಕೇಳಿಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net