ಕೇರಳ: ಕಳೆದ 5 ವರ್ಷದಲ್ಲಿ 64 ಜನರು ವಿವಿಧ ಹಂತದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 18ರ ಬಾಲಕಿ ಎನ್ಜಿಒ ಸಂಸ್ಥೆಯೊಂದಿಗೆ ಹೇಳಿಕೊಂಡಿದ್ದು, ಇದೀಗ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೌನ್ಸಿಂಗ್ ಅವಧಿ ವೇಳೆಯಲ್ಲಿ ಯುವತಿ ತನಗಾದ ಸಂಕಷ್ಟವನ್ನು ಬಹಿರಂಗಪಡಿಸಿದ ಹಿನ್ನೆಲೆ, ಮಕ್ಕಳ ಕಲ್ಯಾಣ ಸಮಿತಿ ನೀಡಿದ ದೂರಿನ ಮೇರೆಗೆ ಇಲ್ಲಿನ ಪತ್ತನಂತಿಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ಸಾಹ ಇರುವವರೆಲ್ಲರೂ ಯುವಕರು; ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವ್ಯಾಖ್ಯಾನ
ಮಹಿಳಾ ಸಮಕ್ಯಂ ಎಂಬ ಎನ್ಜಿಒ ಸಂಸ್ಥೆಯ ಸದಸ್ಯರು ತಮ್ಮ ದಿನ ನಿತ್ಯದ ಭೇಟಿ ವೇಳೆ ಯುವತಿಯ ಮನೆಗೆ ಬಂದು ಮಾತನಾಡಿ ಕೌನ್ಸಿಲಿಂಗ್ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಯುವತಿ ತಾನು ಕಳೆದ 5 ವರ್ಷದಿಂದ ಅನುಭವಿಸಿದ ಭಯಾನಕತೆಯ ಬಗ್ಗೆ ವಿವರವಾಗಿ ಹೇಳಿದ್ದಾರೆ ಎಂದು ಎನ್ಜಿಒ ಸಂಸ್ಥೆ ವರದಿ ಮಕ್ಕಳ ಕಲ್ಯಾಣ ಸಮಿತಿಗೆ ಮಾಡಿದೆ.
ಇದನ್ನೂ ಓದಿ: ಉತ್ಸಾಹ ಇರುವವರೆಲ್ಲರೂ ಯುವಕರು; ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವ್ಯಾಖ್ಯಾನ
ಎನ್ಜಿಒ ಸಂಸ್ಥೆಯ ಸಮಲೋಚನೆ ಮಾಡಿದ ಸಂದರ್ಭದಲ್ಲಿ ”ನನಗೆ 13 ವಯಸ್ಸಿನಲ್ಲಿ ಮೊದಲನೇ ದೌರ್ಜನ್ಯ ನಡೆದಿದೆ. ಬಳಿಕ ಅಲ್ಲಿಂದ ಇಲ್ಲಿತನಕ 64 ಜನರು ಲೌಂಗಿಕವಾಗಿ ಕಿರುಕುಳ ಮತ್ತು ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಶಾಲೆಯಲ್ಲಿ ನಾನು ಕ್ರೀಡೆಯಲ್ಲಿ ಭಾಗವಹಿಸಿದಾಗ ಮತ್ತು ತರಬೇತಿ ಪಡೆಯುವಾಗ ಹಲವರು ದೌರ್ಜನ್ಯ ಎಸಗಿದ್ದು, ವಿಡಿಯೋ ಮತ್ತು ಪೋಟೋ ಶೂಟ್ಗಳನ್ನು ಮಾಡಿದ್ದಾರೆ” ಎಂದು ಯುವತಿ ಹೇಳಿದ್ದಾರೆ.
10 ಜನ ವಶಕ್ಕೆ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೆ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರನ್ನು ಪತ್ತೆ ಹಚ್ಚಲಾಗುವುದು. ಇನ್ನು ಯುವತಿಯ ವಿವರವಾದ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)