ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಕಡವುಗಳಿಂದ ಅನಧಿಕೃತವಾಗಿ ಮರಳು ಸಂಗ್ರಹಿಸುತ್ತಿದ್ದ ಏಳು ದೋಣಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವೆಲ್ಲವೂ ಅನಧಿಕೃತ ದೋಣಿಗಳಾಗಿದ್ದು ನೀರಿನಡಿ ಹೂತಿಡಲಾಗಿದ್ದ ದೋಣಿಗಳನ್ನು ದಡಕ್ಕ ಸಾಗಿಸಿ ನಂತರ ಇವುಗಳನ್ನು ಜೆಸಿಬಿ ಬಳಸಿ ನಾಶಗೊಳಿಸಲಾಯಿತು. ಕುಂಬಳೆ ಠಾಣೆ ಎಸ್.ಐ ಕೆ.ಸುಜೇಶ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಆರು ತಿಂಗಳ ಕಾಲಾವಧಿಯಲ್ಲಿ ಈ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಂಗ್ರಹದ ನೂರಕ್ಕೂ ಹೆಚ್ಚು ದೋಣಿಗಳನ್ನು ವಶಪಡಿಸಿ, ನಾಶಗೊಳಿಸಲಾಗಿದೆ.