ದೀಪಕ್‌ಗೆ ಕುಮಾರ ಸೇವಾರತ್ನ ಪ್ರಶಸ್ತಿ

New Project (4)
Published on

ಬೆಳ್ತಂಗಡಿ: ಹನ್ನೆರಡು ವರ್ಷಗಳಿಂದ ರಾಜ್ಯಮಟ್ಟದಲ್ಲಿ ಸಮಾಜ ಸೇವೆ ಮೂಲಕ ಗುರುತಿಸಿಕೊಂಡಿರುವ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್‌ನ ಸಂಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ ಅವರಿಗೆ ಸ್ಫೂರ್ತಿ ಕುಮಾರ ಸೇವಾರತ್ನ ಪ್ರಶಸ್ತಿ ಲಭಿಸಿದೆ. ಡಿ.29ರಂದು ಬೆಂಗಳೂರಿನ ಉದಯ ಬಾನು ಕಲಾಸಂಘ, ಕನಕಪುರದ ಸ್ಫೂರ್ತಿ ಕಲಾ ಟ್ರಸ್ಟ್‌ನ 12ನೇ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net