

ಬಳ್ಳಾರಿ: ಕರೊನಾ ಭೀತಿಯಿಂದಾಗಿ ಜಿಂದಾಲ್ ಕಂಪನಿಯ ಕೆಲವು ನೌಕರರು ಕೆಲಸಕ್ಕೆ ಗೈರಾಗುತ್ತಿದ್ದಾರೆ. ಇವರನ್ನು ಉದ್ಯೋಗದಿಂದ ತೆಗೆಯಬಾರದು ಎಂದು ಜಿಂದಾಲ್ ಕಂಪನಿಗೆ ಶಾಸಕ ಜಿ.ಸೋಮಶೇಖರರೆಡ್ಡಿ ಎಚ್ಚರಿಸಿದ್ದಾರೆ. ಕೆಲಸಕ್ಕೆ ಬರುವಂತೆ ನೌಕರರಿಗೆ ದೂರವಾಣಿ ಕರೆ ಬರುತ್ತಿವೆ. ಜನರ ಸುರಕ್ಷತೆ ದೃಷ್ಟಿಯಿಂದ ಕಂಪನಿ ಟೌನ್ಶಿಪ್ನಲ್ಲಿ ವಾಸವಿರುವ ಉದ್ಯೋಗಿಗಳಿಂದ ಕಾರ್ಖಾನೆ ನಡೆಸಬೇಕು. ಬಳ್ಳಾರಿಯಿಂದ ಕೆಲಸಕ್ಕೆ ಬರುವ ಸಿಬ್ಬಂದಿಗೆ ತಾತ್ಕಾಲಿಕ ವಿನಾಯಿತಿ ನೀಡಬೇಕು. ಸಿಬ್ಬಂದಿಗೆ ಸಮಸ್ಯೆಯಾದರೆ ಕಾರ್ಖಾನೆ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಜಿ.ಸೋಮಶೇಖರರೆಡ್ಡಿ ಮಾತನಾಡಿದರು.