ಸೇವಾಲಾಲ ತತ್ವಾದರ್ಶ ಪಾಲಿಸಿ

TLK
ತಾಳಿಕೋಟೆ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಿಸಲಾಯಿತು. ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ, ಮುಖ್ಯಶಿಕ್ಷಕ ಸಂತೋಷ ಪವಾರ, ಶಿಕ್ಷಕರಾದ ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ ಇತರರಿದ್ದರು.
Published on

ತಾಳಿಕೋಟೆ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ 286ನೇ ಜಯಂತಿ ಆಚರಿಸಲಾಯಿತು.

ಮುಖ್ಯಶಿಕ್ಷಕ ಸಂತೋಷ ಪವಾರ ಮಾತನಾಡಿ, ಸಂತ ಸೇವಾಲಾಲರು ಹಲವಾರು ಪವಾಡಗಳನ್ನು ಮಾಡಿದ್ದಾರಲ್ಲದೆ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ಎಲ್ಲರೂ ಅವರ ಆದರ್ಶ ಪಾಲನೆ ಮಾಡಬೇಕೆಂದು ತಿಳಿಸಿದರು.

ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಶಿಕ್ಷಕರಾದ ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಭೀಮನಗೌಡ ಸಾಸನೂರ, ರಸೂಲಸಾ ತುರ್ಕನಗೇರಿ, ರವಿಕುಮಾರ ಮಲ್ಲಾಬಾದಿ, ಬಸವರಾಜ ಸವದತ್ತಿ, ಮೌಲಾಲಿ ವಾಲಿಕಾರ, ಸಿದ್ದನಗೌಡ ಮೂದನೂರು, ಶರಣಗೌಡ ಕಾಚಾಪುರ, ರಮೇಶ ಪಾಸೋಡಿ, ರೂಪಾ ಪಾಟೀಲ, ಶಿವಲೀಲಾ ಚುಂಚನೂರ, ದೇವಿಂದ್ರ ಗುಳೆದ, ಅನಿತಾ ಚೌದ್ರಿ, ಅಂಬುಜಾ ಹಜೇರಿ, ಶಿವಕುಮಾರ ಕುಂಬಾರ, ರಾಜಬಿ ಬಿದರಿ, ಕಲ್ಪನಾ ಹಜೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net