ಕಾಸರಗೋಡು ಜಿಲ್ಲೆಯಲ್ಲಿ ಸರಣಿ ಕಳವು

Kottur theft
Published on

ಕಾಸರಗೋಡು: ಜಿಲ್ಲೆಯ ವಿವಿಧೆಡೆ ಸರಣಿ ಕಳವು ನಡೆದಿದ್ದು, ನಗದು ಹಾಗೂ ಸಾಮಗ್ರಿ ದೋಚಲಾಗಿದೆ. ಕಾಸರಗೋಡು ನಗರದ ಎಂ.ಜಿ. ರಸ್ತೆಯ ಮೂರು ಅಂಗಡಿಗಳಿಂದ ಮಂಗಳವಾರ ರಾತ್ರಿ ಕಳವು ನಡೆದಿದೆ. ಕಾಸರಗೋಡು ಪೋರ್ಟ್ ರಸ್ತೆ ನಿವಾಸಿ ಶಾಲಿನಿ ಎಂಬುವರ ಮಾಲೀಕತ್ವದ ೂಟ್‌ವೇರ್ ಅಂಗಡಿ, ಯೂಸುಫ್ ಎಂಬುವರ ಮಾಲೀಕತ್ವದ ಮಿನಿಮಾರ್ಟ್ ಗ್ರೋಸರಿ ಶಾಪ್, ವಾೌಡ್ ನಿವಾಸಿ ಎಂ.ಕೆ.ಶಂಸುದ್ದೀನ್ ಮಾಲೀಕತ್ವದ ಆಶ್ವಾಸ್ ಕಮ್ಯೂನಿಟಿ ಫಾರ್ಮಸಿಯಿಂದ ಕಳವು ನಡೆದಿದೆ. ಚೆಂಗಳ ಪಾಣಲ ನಿವಾಸಿ ಅಬ್ದುಲ್‌ಖಾದರ್ ಮಾಲೀಕತ್ವದ ತರಕಾರಿ ಅಂಗಡಿಯ ಬೀಗ ಒಡೆಯಲಾಗಿದ್ದು, ಗ್ರಿಲ್ಸ್ ತೆರೆಯಲಾಗದಿರುವುದರಿಂದ ಕಳವು ವಿಫಲವಾಗಿದೆ. ಯೂಸುಫ್ ಎಂಬುವರ ಮಿನಿ ಮಾರ್ಟ್‌ನಿಂದ 5 ಸಾವಿರ ರೂ. ನಗದು, ವಿವಿಧ ಸಾಮಗ್ರಿ ಕಳವುಗೈದಿದ್ದಾರೆ. ಕೆಲವು ವಸ್ತು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ನಗರ ಪೊಲೀಸ್ ಠಾಣಾ ಅನತಿ ದೂರದಲ್ಲಿ ನಡೆದಿರುವ ಕಳವು ಕೃತ್ಯಗಳು ಜನರಲ್ಲಿ ಆತಂಕವನ್ನು ತಂದೊಡ್ಡಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಂಜೇಶ್ವರದ ಹೊಸಂಗಡಿಯಲ್ಲಿ ಪೈವಳಿಕೆ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಪೊಸೋಟ್ ನಿವಾಸಿ ಸಿದ್ದೀಕ್ ಎಂಬುವರ ಮಾಲೀಕತ್ವದ ಬೇಕರಿಗೆ ನುಗ್ಗಿದ ಕಳ್ಳರು 50 ಸಾವಿರ ರೂ.ಮೌಲ್ಯದ ಸಾಮಗ್ರಿ ಕಳವುಗೈದಿದ್ದಾರೆ. ಸಿದ್ದೀಕ್ ಬುಧವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಆಗಮಿಸಿದಾಗ ಶಟರ್‌ಬಾಗಿಲು ಅರ್ಧ ತೆರೆದಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಪಾಸಣೆ ನಡೆಸಿದಾಗ ಸಾಮಗ್ರಿ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net