More

    ಚೆಪಾಕ್‌ನಲ್ಲೂ ಮೈದಾನಕ್ಕಿಳಿದು ಗೊಂದಲ ಸೃಷ್ಟಿಸಿದ ಜಾರ್ವೋ! : ಬಿಸಿ ಮುಟ್ಟಿಸಿದ ಐಸಿಸಿ

    ಚೆನ್ನೈ: ಭದ್ರತೆಯನ್ನು ಉಲ್ಲಂಸಿ ಕ್ರಿಕೆಟ್ ಅಂಗಣಕ್ಕಿಳಿದು ವಿಚಿತ್ರ ವರ್ತನೆ ತೋರುವ ಇಂಗ್ಲೆಂಡ್‌ನ ಯೂಟ್ಯೂಬರ್ ಡೇನಿಯಲ್ ಜಾರ್ವಿಸ್ (ಜಾರ್ವೋ) ವಿಶ್ವಕಪ್‌ನಲ್ಲೂ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ಕೆಲಕಾಲ ಗೊಂದಲ ಸೃಷ್ಟಿಸಿದರು. ಜಾರ್ವೋ ಬರಹವುಳ್ಳ ಟೀಮ್ ಇಂಡಿಯಾದ ನೀಲಿ ಜೆರ್ಸಿ ಧರಿಸಿದ್ದ ಜಾರ್ವೋ, ವಿಐಪಿ ಏರಿಯಾದಿಂದ ಭದ್ರತಾ ಸಿಬ್ಬಂದಿಯನ್ನು ವಂಚಿಸಿ ಮೈದಾನಕ್ಕಿಳಿದು, ವಿರಾಟ್ ಕೊಹ್ಲಿ ಬಳಿ ಧಾವಿಸಲು ಯತ್ನಿಸಿದರು. ಕೂಡಲೆ ರಕ್ಷಣಾ ಸಿಬ್ಬಂದಿ ಜಾರ್ವೋರನ್ನು ಮೈದಾನದಿಂದ ಹೊರಗಟ್ಟಿದರು. 4ನೇ ಬಾರಿಗೆ ನಿಯಮ ಉಲ್ಲಂಸಿದ ಜಾರ್ವೋ ವಿರುದ್ಧ ಐಸಿಸಿ ಕಠಿಣ ಕ್ರಮ ಜರುಗಿಸಿದ್ದು, ವಿಶ್ವಕಪ್‌ನ ಪಂದ್ಯ ಆತಿಥ್ಯವಹಿಸಿರುವ ಎಲ್ಲ ಕ್ರೀಡಾಂಗಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಇದಕ್ಕೂ ಮುನ್ನ 2021ರಲ್ಲಿ ಹೆಡಿಂಗ್ಲೆಯಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಹೆಲ್ಮೆಟ್, ಪ್ಯಾಡ್ ಧರಿಸಿ ಆಟಗಾರನಂತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಜಾರ್ವೋ, ಲಾರ್ಡ್ಸ್ ಟೆಸ್ಟ್‌ನಲ್ಲಿಯೂ ಮೈದಾನಕ್ಕೆ ನುಗ್ಗಿದ್ದರು. ಜಾರ್ವೋ ತನ್ನ ಎಕ್ಸ್ ಖಾತೆಯ ಬಯೋದಲ್ಲಿ ಹಾಸ್ಯನಟ,ನಿರ್ಮಾಪಕ, ಕುಚೇಷ್ಟೆಗಾರ ಎಂದು ಬರೆದುಕೊಂಡಿದ್ದಾರೆ. ತವರಿನ ಪಂದ್ಯಗಳ ಟಿಕೆಟ್ ಪಡೆಯಲು ಭಾರತೀಯ ಕ್ರೀಡಾಭಿಮಾನಿಗಳು ಪರದಾಡುವಂತಾಗಿದ್ದರೆ, ಇತ್ತ ಜಾರ್ವೋಗೆ ವಿಐಪಿ ಪಾಸ್ ದೊರೆತಿರುವುದು ಅಚ್ಚರಿ ಎನಿಸಿದೆ.

    https://x.com/cricbuzz/status/1711025766022987883?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts