ಹ್ಯಾಕ್ ಆಗಿದ್ದ ಇನ್​ಸ್ಟಾಗ್ರಾಂ ಖಾತೆ ಸರಿಪಡಿಸಿಕೊಂಡ ನಟಿ ಮೇಘಾ ಶೆಟ್ಟಿ

p4megha1
Published on

ಬೆಂಗಳೂರು: ಸಿನಿಮಾ ಮಂದಿಯ ಸೋಷಿಯಲ್ ಮೀಡಿಯಾ ಖಾತೆ ಆಗಾಗ ಹ್ಯಾಕ್​ ಆಗುತ್ತಲೇ ಇರುತ್ತವೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅವರ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್​ ಆಗಿದೆ. ಅಷ್ಟೇ ಅಲ್ಲ ತಕ್ಷಣ ಅದನ್ನು ಸರಿಪಡಿಸಿಕೊಂಡಿದ್ದಾರವರು.

ಹೌದು, ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೇಘಾ, ನನ್ನ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ಆದರೆ, ನಾನು ಅದನ್ನು ಇದೀಗ ಸರಿಪಡಿಸಿಕೊಂಡಿದ್ದೇನೆ. ಸಾಕಷ್ಟು ಜನ ಮತ್ತು ಅಭಿಮಾನಿಗಳು ನಿಮ್ಮ ಖಾತೆಯನ್ನು ಯಾರು ಹ್ಯಾಂಡಲ್​ ಮಾಡುತ್ತಿದ್ದಾರೆ ಎಂದು ಕೇಳಿದ್ದರು. ನನ್ನ ಖಾತೆಯನ್ನು ನಾನೇ ನಿಭಾಯಿಸುತ್ತಿದ್ದೇನೆ‘ ಎಂದು ಹೇಳಿಕೊಂಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ನಟಿ ಮೇಘಾ ಶೆಟ್ಟಿ, ಆ ಧಾರಾವಾಹಿಯ ಖ್ಯಾತಿಯಿಂದಲೇ ಗಣೇಶ್​ ಜತೆಗೆ ತ್ರಿಬಲ್​ ರೈಡಿಂಗ್​ ಸಿನಿಮಾದಲ್ಲಿ ಚಾನ್ಸ್ ಸಹ ಗಿಟ್ಟಿಸಿಕೊಂಡು ಇದೀಗ ಸಿನಿಮಾದಲ್ಲಿಯೂ ಸಕ್ರಿಯರಾಗಿದ್ದಾರೆ. ಅಷ್ಟೇ ಅಲ್ಲ ಮೋನಿಕಾ ಕಲ್ಲೂರಿ ಅವರ ನೋಡು ಶಿವ ಹೆಸರಿನ ಆಲ್ಬಂನಲ್ಲಿಯೂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net