ಕೇಂದ್ರ ಸಂಪುಟ ಕಾರ್ಯದರ್ಶಿ ಐಎಎಸ್​ ಅಧಿಕಾರಿ ಟಿವಿ ಸೋಮನಾಥನ್ ನೇಮಕ

tv somanathan
Published on

ನವದೆಹಲಿ: ಐಎಎಸ್ ಅಧಿಕಾರಿ ಟಿವಿ ಸೋಮನಾಥನ್ ಅವರನ್ನು ಸಂಪುಟ ಕಾರ್ಯದರ್ಶಿಯಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೇಮಿಸಿದೆ.

ಮುಂದಿನ ಎರಡು ವರ್ಷಗಳ ಅವಧಿಗೆ ಸಂಪುಟ ಕಾರ್ಯದರ್ಶಿಯಾಗಿ ನೇಮಕ ಮಾಡಲು. ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ರಾಜೀವ್ ಗೌಬಾ ಅವರಿಗೆ ಸಂಪುಟ ಕಾರ್ಯದರ್ಶಿಯಾಗಿ ಎರಡನೇ ಬಾರಿ ವಿಸ್ತರಣೆ ಮಾಡಲಾಗಿಲ್ಲ.

ಸೋಮನಾಥನ್ ಅವರು ತಮಿಳುನಾಡು ಕೇಡರ್‌ನ 1987-ಬ್ಯಾಚ್ ಐಎಎಸ್ ಅಧಿಕಾರಿ. 2021ರಿಂದ ಸೋಮನಾಥನ್ ಅವರು ಕೇಂದ್ರ ಹಣಕಾಸು ಕಾರ್ಯದರ್ಶಿ ಮತ್ತು ವೆಚ್ಚದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳಲ್ಲಿ ಅವರು ಅತ್ಯಂತ ಹಿರಿಯರಾಗಿದ್ದರು.

ಸೋಮನಾಥನ್ ಅವರು ಆಡಳಿತಾತ್ಮಕ ಸೇವೆಗಳಲ್ಲಿ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಣಕಾಸು ಸಚಿವಾಲಯಕ್ಕೆ ಸೇರುವ ಮೊದಲು ಅವರು ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಇದಲ್ಲದೇ ಬಜೆಟ್ ಮೇಕಿಂಗ್ ತಂಡದಲ್ಲೂ ಅವರಿದ್ದರು ಎನ್ನಲಾಗಿದೆ.

ರಾಜೀವ್ ಗೌಬಾ ಅವರು ಐದು ವರ್ಷಗಳ ಹಿಂದೆ ಆಗಸ್ಟ್ 30, 2019 ರಂದು ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net