More

    ಲೋಕಸಭಾ ಚುನಾವಣೆ; ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಪ್ರಾಣ ಬಿಟ್ಟ ವೃದ್ಧೆ

    ಉಡುಪಿ: ಲೋಕಸಭಾ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗ ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಮನೆಯಲ್ಲಿ ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ವಯೋವೃದ್ಧೆ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

    ಪಿ.ಯಶೋಧಾ ನಾರಾಯಣ ಉಪಾಧ್ಯ (83) ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ. ಪಿ.ಯಶೋಧಾ ಮನೆಯಲ್ಲಿ ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ. ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ನಿವಾಸಿಯಾಗಿದ್ದರು.

    ಮತದಾನದ ದಿನ ಪಿ.ಯಶೋಧಾ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿ ಆಸ್ಪತ್ರೆ ತೆರಳಲು ಪಿ.ಯಶೋಧಾ ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕ ಪಿ.ಯಶೋಧಾ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕ್ಸತ್ಸೆ ಫಲಕಾರಿಯಾಗದೆ ಪಿ.ಯಶೋಧಾ ಅವರು ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

    2ನೇ ಮದ್ವೆಗೆ ದ್ವಾರಕೀಶ್​​​ ಮೊದಲ ಪತ್ನಿಯಿಂದ ಸಿಕ್ಕಿತ್ತು ಗ್ರೀನ್ ಸಿಗ್ನಲ್; ಹೆಂಡ್ತಿ, ಮಕ್ಕಳ ಸಮ್ಮುಖದಲ್ಲೇ ನಡೆದಿತ್ತು ಮತ್ತೊಂದು ಮದುವೆ

    ದ್ವಾರಕೀಶ್​ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದ್ರಾ ವಿಷ್ಣು? ಕೊನೆಗೆ ಆಪ್ತಮಿತ್ರನಿಗೆ ಆಪ್ತರಕ್ಷಕನಾದ ರೋಚಕ ಕಥೆ ಇದು….

    ಸಿನಿಮಾಗಾಗಿ 15 ಮನೆ ಮಾರಿ ಬಾಡಿಗೆ ನಿವಾಸದಲ್ಲಿ ವಾಸ; ದ್ವಾರಕೀಶ್ ಬದುಕಿನ ದುರಂತ ಕಥೆ ಇದು…​

    ಒಂದೇ ಒಂದು ಕೋಳಿ ಮೊಟ್ಟೆ ಲಕ್ಷ ಲಕ್ಷ ರೂ.ಗೆ ಹರಾಜು; ಈ ಹಣವೆಲ್ಲಾ ಮಸೀದಿ ನಿರ್ಮಾಣಕ್ಕೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts