ಬಿಜೆಪಿ ಸರ್ವೆ ಬೂತ್ ಸಮಿತಿಗೆ ಅಧ್ಯಕ್ಷರ ಆಯ್ಕೆ

Ism_BJP Survey
Published on

ಪುತ್ತೂರು ಗ್ರಾವಾಂತರ: ಬಿಜೆಪಿ ಸರ್ವೆ 192 ಬೂತ್ ಸಮಿತಿಯ ಅಧ್ಯಕ್ಷರಾಗಿ ಜಯಂತ್ ಭಕ್ತಕೋಡಿ ಹಾಗೂ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಸರ್ವೆ ಆಯ್ಕೆಗೊಂಡಿದ್ದಾರೆ.

ಸರ್ವೆ ಗ್ರಾಮದ ಸರ್ವೆ ರಕ್ತೇಶ್ವರಿ ಕಟ್ಟೆ ಬಳಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ವಾಡಲಾಯಿತು. ಸಮಿತಿ ಸದಸ್ಯರಾಗಿ ಬೆಳಿಯಪ್ಪ ಗೌಡ, ದಿನೇಶ್ ಕೆ., ಪ್ರೇಮಾ ಬಿ., ವಿನಯ ಕುವಾರ್ ರೈ, ಕವಿತಾ ಲೋಕೇಶ್, ಪ್ರಿಯಾ ಮಹೇಶ್ ಬಿ., ವೆಂಕಪ್ಪ ಗೌಡ, ಯೋಗೀಶ್ ಟಿ. ಅವರನ್ನು ಆಯ್ಕೆ ಮಾಡಲಾಯಿತು.

ಬಿಜೆಪಿ ಪ್ರಮುಖರಾದ ಅರುಣ್ ಕುವಾರ್ ಪುತ್ತಿಲ, ಉಮೇಶ್ ಕೋಡಿಬೈಲ್, ಚಂದ್ರಶೇಖರ ಎನ್.ಎಸ್.ಡಿ., ಅಶೋಕ್ ರೈ ಸೊರಕೆ, ವೀರಪ್ಪ ಗೌಡ ಕರುಂಬಾರು, ಗೌತಮ್ ರೈ ಸರ್ವೆ, ಬೆಳ್ಳಿಯಪ್ಪ ಗೌಡ ಸರ್ವೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net