

ಕೋಟ: ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಪಂ ಆಸರೆಯಲ್ಲಿ ಕೊಡಮಾಡುವ ಡಾ.ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ ಪ್ರದಾನ ಸೆ.16ರಂದು ಸಂಜೆ 3ಕ್ಕೆ ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯಲಿದೆ.
ಸ.ಹಿ.ಪ್ರಾ.ಶಾಲೆ ಸಾಸ್ತಾವು ಪ್ರಭಾರ ಮುಖ್ಯ ಶಿಕ್ಷಕಿ ವನಿತಾ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಬ್ರಕಟ್ಟೆ ಶಿಕ್ಷಕ ಸುರೇಂದ್ರ ಕೋಟ, ವಿವೇಕ ಪದವಿ ಪೂರ್ವ ಕಾಲೇಜು ಮತ್ತು ಫ್ರೌಡಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಶೆಟ್ಟಿ, ಹಿಂದು ಮಾದರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಶಿಕ್ಷಕ ಮಂಜುನಾಥ, ಸ.ಹಿ.ಪ್ರಾ. ಶಾಲೆ ಉಪ್ಪೂರು ಬ್ರಹ್ಮಾವರ ಶಿಕ್ಷಕಿ ಚೆಲುವ ಕುಮಾರಿ, ಸ.ಹಿ.ಪ್ರಾ. ಶಾಲೆ ಹೆಸಕುತ್ತೂರು ಮುಖ್ಯ ಶಿಕ್ಷಕ ಶೇಖರ್, ಸರ್ಕಾರಿ ಫ್ರೌಡಶಾಲೆ ಕುಕ್ಕೆಹಳ್ಳಿ ಶಿಕ್ಷಕಿ ಲಿನಟ್ ವಾರ್ತಾ ಡಿಸೋಜ, ಸ.ಹಿ.ಪ್ರಾಥಮಿಕ ಶಾಲೆ ಬಣ್ಣಂಪಳ್ಳಿ ಶಿಕ್ಷಕಿ ಚಂದ್ರಮತಿ ದೇವಾಡಿಗ, ಸರ್ಕಾರಿ ಫ್ರೌಡಶಾಲೆ ಕಾವಡಿ ಶಿಕ್ಷಕ ಪ್ರಶಾಂತ್ ಜತ್ತನ್, ಸರ್ಕಾರಿ ಸಂಯುಕ್ತ ಫ್ರೌಡಶಾಲೆ(ಪ್ರಾಥಮಿಕ ಭಾಗ) ಮಣೂರು ದೈಹಿಕ ಶಿಕ್ಷಕ ನಾರಾಯಣ ಮೋಗವೀರ ಆಯ್ಕೆಯಾಗಿದ್ದಾರೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್, ಕೋಟತಟ್ಟು ಗ್ರಾಪಂ ಅಧ್ಯಕ್ಷ ಕೆ.ಸತೀಶ್ ಕುಂದರ್, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.