ಕಾರವಾರ: ಚಿತ್ತಾಕುಲಾ ಸೀಬರ್ಡ್ See bard ನಿರಾಶ್ರಿತರ ಕಾಲನಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಎಂಎಲ್‌ಸಿ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಬಿಣಗಾ, ಸಂಕ್ರುಭಾಗ, ಅರಗಾ, ಅಲಿಗದ್ದಾ, ಕೋಡಾರ ಮಂತಾದ ಪ್ರದೇಶಗಳ ಜನರನ್ನು 1999ರಲ್ಲಿ ಸೀಬರ್ಡ್ ನೌಕಾ ಯೋಜನೆಗಾಗಿ ಸ್ಥಳಾಂತರಿಸಿ, ಚಿತ್ತಾಕುಲಾ ಸೀಬರ್ಡ್ ಕಾಲನಿಯಲ್ಲಿ ಪುನರ್ವಸತಿ ಕಲ್ಪಿಸಲಾಯಿತು. 25 ವರ್ಷ ಕಳೆದರೂ ಯಾವುದೇ ಮೂಲ ಸೌಕರ್ಯ ದೊರಕಿಲ್ಲ. ರಸ್ತೆಗಳು ಹಾಳಾಗಿವೆ. ಮಳೆಗಾಲದಲ್ಲಿ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲ.
See bard
ಸ್ಪಂದಿಸಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ತಕ್ಷಣ ಸರ್ವೇ ಮಾಡಿ, ವರದಿ ನೀಡುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು. ಸ್ಥಳೀಯರಾದ ಉಮೇಶ ತಾಂಡೇಲ್, ಮಾರುತಿ ತಾಂಡೇಲ್, ಪ್ರಶಾಂತ ತಾಂಡೇಲ್, ಗಣಪತಿ ತಾಂಡೇಲ್ ಇತರರು ಇದ್ದರು.
ಇದನ್ನೂ ಓದಿ:
https://www.youtube.com/watch?v=YbO5VzdzV1U