ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಶನಿವಾರ ನಸುಕಿನ ವೇಳೆ ಭದ್ರತಾ ಪಡೆಗಳ ಉಗ್ರ ನಿಗ್ರಹ ಕಾರ್ಯಾಚರಣೆಗೆ ಮೂವರು ಉಗ್ರರು ಹತರಾಗಿದ್ದಾರೆ. ಈ ನಡುವೆ, ಪ್ರತ್ಯೇಕ ಘಟನೆಯಲ್ಲಿ ಪಾಕಿಸ್ಥಾನದ ಸೇನಾ ಪಡೆ ಪೂಂಛ್ ಸಮೀಪ ಗಡಿ ನಿಯಂತ್ರಣ ರೇಖೆ ಸಮೀಪ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಗೆ ಮೂವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಭದ್ರತಾ ಪಡೆಗಳು ಶೋಪಿಯಾನ್ನ ಅಂಶಿಪೋರಾ ಪ್ರದೇಶದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ, ಉಗ್ರರು ಗುಂಡಿನ ದಾಳಿ ನಡೆಸಲಾರಂಭಿಸಿದರು. ಪರಿಣಾಮ ಸೇನೆ ಕೂಡ ಪ್ರತಿದಾಳಿ ನಡೆಸಿತ್ತು. ಈ ಪ್ರತಿದಾಳಿಯ ಪರಿಣಾಮ ಮೂವರು ಉಗ್ರರು ಹತರಾಗಿದ್ದಾರೆ.
ಇದನ್ನೂ ಓದಿ: ಮಕ್ಕಳಲ್ಲಿ ನಾಯಕತ್ವ ಲಕ್ಷಣಗಳನ್ನು ಬೆಳೆಸುವ ಬಗೆ
ಗಡಿಭಾಗದಲ್ಲಿ ಪೂಂಛ್ನ ಸಮೀಪ ಗಡಿ ನಿಯಂತ್ರನ ರೇಖೆ ಬಳಿ ಖಾರಿ ಕರ್ಮಾರಾ ಸೆಕ್ಟರ್ನಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಶೆಲ್ ದಾಳಿ ನಡೆಸಿದ ವೇಳೇ ಅದು ಮನೆಗೆ ಬಡಿದು, ಅದರೊಳಗಿದ್ದ ತಂದೆ, ತಾಯಿ, ಮಗ ಮೃತಪಟ್ಟಿದ್ದಾರೆ. ಈ ದಾಳಿ ಶುಕ್ರವಾರ ಸಂಜೆ 7.20ಕ್ಕೆ ನಡೆದಿತ್ತು. ಈ ವರ್ಷ ಜನವರಿಂದೀಚೆಗೆ ಇಲ್ಲಿ ತನಕ ಪಾಕಿಸ್ತಾನ 2,400 ಸಲ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ. (ಏಜೆನ್ಸೀಸ್)
ಸಿಎಂ ಯೋಗಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ಅಮೇಠಿಯ ತಾಯಿ-ಮಗಳು!