ಕರೊನಾ ಕಾಲಿಟ್ಟ ಬೆನ್ನಲ್ಲೇ ಕೊಡಗು ಜಿಲ್ಲಾದ್ಯಂತ ಸೆಕ್ಷನ್​ 144 ಜಾರಿ; ಹೋಟೆಲ್​, ರೆಸಾರ್ಟ್​ಗಳೆಲ್ಲ ಮಾ.31ರವರೆಗೆ ಬಂದ್​

Kodagu 19 march 20
Published on

ಬೆಂಗಳೂರು: ಚೀನಾದಲ್ಲಿ ಹುಟ್ಟಿದ ಕರೊನಾ ವೈರಸ್​ ಇದೀಗ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಕರ್ನಾಟಕದಲ್ಲಿ ಕೂಡ ಪ್ರತಿದಿನ ಒಂದೊಂದೊಂದು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.

ಇಂದು ಕೊಡಗು ಜಿಲ್ಲೆಯ ವ್ಯಕ್ತಿಯೋರ್ವನಲ್ಲಿ ಕರೊನಾ ಪತ್ತೆಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ. ಕೊಡಗಿನ ವ್ಯಕ್ತಿ ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ವಾಪಸ್ ಆಗಿದ್ದ. ಸದ್ಯ ಆತನಿಗೆ ಆಸ್ಪತ್ರೆಯ ಐಸೋಲೇಶನ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೀಗ ಓರ್ವನಲ್ಲಿ ಕರೊನಾ ವೈರಸ್​ ಪತ್ತೆಯಾದ ಬೆನ್ನಲ್ಲೇ ಕೊಡಗು ಜಿಲ್ಲೆಯಾದ್ಯಂತ ಸೆಕ್ಷನ್​ 144 ಜಾರಿ ಮಾಡಲಾಗಿದೆ. ಮಾ.31ರವರೆಗೆ ಎಲ್ಲ ಹೋಟೆಲ್​ಗಳು, ಲಾಡ್ಜ್​ಗಳು, ರೆಸಾರ್ಟ್​ಗಳು ಮತ್ತು ಹೋಮ್​ ಸ್ಟೇಗಳು ಬಂದ್​ ಆಗಿರಲಿವೆ ಎಂದು ಕೊಡಗು ಡಿಸಿ ಮಾಹಿತಿ ನೀಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net