

ಉಪ್ಪಿನಂಗಡಿ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಎರಡನೇ ಮಹಾಶಿವರಾತ್ರಿ ಮಖೆ ಜಾತ್ರೆ ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಬುಧವಾರ ರಾತ್ರಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆದು, ಭಕ್ತರಿಂದ ರುದ್ರಪಾರಾಯಣ ನಡೆಯಿತು. ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆದು ಮಹಾಪೂಜೆ ನೆರವೇರಿತು.
ಗುರುವಾರ ಪ್ರಾತಃಕಾಲ ಅಸಂಖ್ಯ ಭಕ್ತರಿಂದ ಪವಿತ್ರ ಮಖೆ ತೀರ್ಥಸ್ನಾನ ನೆರವೇರಿತು. ಶ್ರೀ ದೇವರ ಬಲಿ ಹೊರಟು ರಥೋತ್ಸವವು ಜರುಗಿತು. ನಂತರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಟ್ಟು ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಜಾತ್ರೋತ್ಸವದ ಅಂಗವಾಗಿ ಯಕ್ಷಗಾನ, ಭಕ್ತಿ ಭಜನ್ ಸಂಗೀತ ಕಾರ್ಯಕ್ರಮ ನಡೆಯಿತು.
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕೆ.ಹರೀಶ್ ಉಪಾಧ್ಯಾಯ, ಸೋಮನಾಥ, ಡಾ.ರಮ್ಯಾ ರಾಜಾರಾಮ್, ಅನಿತಾ ಕೇಶವ ಗೌಡ, ಬಿ.ಗೋಪಾಲಕೃಷ್ಣ ರೈ, ಜಿ.ಅರ್ತಿಲ ಕೃಷ್ಣ ರಾವ್, ದೇವಿದಾಸ್ ರೈ ಬಿ, ಎಂ.ವೆಂಕಪ್ಪ ಪೂಜಾರಿ, ಪ್ರಮುಖರಾದ ಮಾಜಿ ಶಾಸಕ ಸಂಜೀವ ಮಠಂದೂರು, ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್, ಪ್ರಮುಖರಾದ ಕರುಣಾಕರ ಸುವರ್ಣ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಡಾ.ರಾಜಾರಾಮ ಕೆ.ಬಿ, ರಾಮಚಂದ್ರ ಮಣಿಯಾಣಿ, ಎನ್.ಗೋಪಾಲ ಹೆಗ್ಡೆ, ಐ.ಚಿದಾನಂದ ನಾಯಕ್, ಸುನೀಲ್ ಅನಾವು, ತಿಮ್ಮಪ್ಪ ಗೌಡ, ಜಯಂತ ಪೊರೋಳಿ, ಗೋವಿಂದಪ್ರಸಾದ್ ಕಜೆ, ಸುಧಾಕರ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್, ಅನುರಾಧಾ ಆರ್.ಶೆಟ್ಟಿ, ವಿದ್ಯಾಧರ ಜೈ, ಸ್ವರ್ಣೇಶ್, ದೇವಳದ ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್, ಕೃಷ್ಣಪ್ರಸಾದ್, ಸುಧಾಕರ ಶೆಟ್ಟಿ, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.