ಎಸ್‌ಡಿಎಂ ಅಂತರ್ ಕಾಲೇಜು ಗೂಡುದೀಪ ಸ್ಪರ್ಧೆ

New Project (11)
Published on

ಬೆಳ್ತಂಗಡಿ: ಎಸ್‌ಡಿಎಂ ಪದವಿ ಶಿಕ್ಷಣ ಸಂಸ್ಥೆಗಳ ಅಂತರ್ ಕಾಲೇಜು ಗೂಡುದೀಪ ರಚನಾ ಸ್ಪರ್ಧೆ, ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.

ಸ್ಪರ್ಧೆಯಲ್ಲಿ 30 ತಂಡಗಳು ಭಾಗವಹಿಸಿದ್ದವು. ಪರಿಸರ ಸ್ನೇಹಿ ವಸ್ತುಗಳಿಂದ ಗೂಡುದೀಪ ರಚಿಸಲು ಪ್ರಾಮುಖ್ಯ ನೀಡಲಾಗಿತ್ತು.

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಅನು ಪ್ರಕಾಶ್ ಮತ್ತು ಜೀವನ್ ಪ್ರಥಮ ಸ್ಥಾನ, ಎಸ್‌ಡಿಎಂ ನ್ಯಾಚುರೋಪತಿ ಕಾಲೇಜಿನ ಸಂಸ್ಕೃತಿ ಜೈನ್ ಮತ್ತು ಅಕ್ಷಯ್ ದ್ವಿತೀಯ ಹಾಗೂ ಇಂಜಿನಿಯರಿಂಗ್ ಕಾಲೇಜಿನ ನವ್ಯಾ ಮತ್ತು ಸಿಂಚನಾ ತೃತೀಯ ಸ್ಥಾನ ಪಡೆದರು.

ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ವಿಜೇತರಿಗೆ ನಗದು ಬಹುಮಾನ ವಿತರಿಸಿದರು. ತೀರ್ಪುಗಾರರಾಗಿ ಡಾ.ರವೀಶ್ ಪಡುಮಲೆ ಹಾಗೂ ಡಾ.ಶೋಭಾ ಜೀವಂಧರ್ ಸಹಕರಿಸಿದರು. ಸಹಪ್ರಾಧ್ಯಾಪಕ ಡಾ.ಕೃಷ್ಣಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net