ಮರು ಮೌಲ್ಯಮಾಪನದಲ್ಲಿ ಅಂಕ ಹೆಚ್ಚಳ, ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಪಡೆದ  ಬಿಜಿಎಸ್ ಆಂಗ್ಲ ಶಾಲೆಯ ಪೂರ್ವಿ

01.jpg
Published on

ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಮರು ಮೌಲ್ಯಮಾಪನದಲ್ಲಿ 625 ಕ್ಕೆ 625 ಅಂಕಗಳೊಂದಿಗೆ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಆಂಗ್ಲ ಶಾಲೆಯ ವಿದ್ಯಾರ್ಥಿನಿ ಎಸ್.ಪೂರ್ವಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಕಳೆದ ಮೇ.2 ರಂದು ಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಪೂರ್ವಿಗೆ 624 ಅಂಕ ಬಂದಿತ್ತು. ಇದರಿಂದ ಪ್ರಶ್ನೆಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ, ಪರಿಶೀಲಿಸಿದಾಗ ಬಾಕಿ 1 ಅಂಕ ಸಿಕ್ಕಿದೆ. ಇದರೊಂದಿಗೆ 625 ಕ್ಕೆ 625 ಅಂಕಗಳಿಂದ ಶೇ.100 ರಷ್ಟು ಲಿತಾಂಶದ ರ್ಯಾಂಕ್ ಸಿಕ್ಕಿದೆ. ಇನ್ನು ಶಾಲೆಯ ಆರು ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು, ಇಬ್ಬರು ವಿದ್ಯಾರ್ಥಿಗಳು 625ಕ್ಕೆ 623 ಅಂಕಗಳನ್ನು, ಆರು ವಿದ್ಯಾರ್ಥಿಗಳು 625 ಕ್ಕೆ 621 ಅಂಕಗಳನ್ನು ಮತ್ತು ಐದು ವಿದ್ಯಾರ್ಥಿಗಳು 625ಕ್ಕೆ 620 ಅಂಕಗಳನ್ನು ಗಳಿಸಿದ್ದಾರೆ.
ಪ್ರಥಮ ರ್ಯಾಂಕ್ 1, ದ್ವೀತಿಯ ರ್ಯಾಂಕ್ 6, ತೃತೀಯ ರ್ಯಾಂಕ್  2, ಐದನೇ ರ್ಯಾಂಕ್ 5, ಆರನೇ ರ್ಯಾಂಕ್ 3 ವಿದ್ಯಾರ್ಥಿಗಳು ಪಡೆದಿದ್ದು ಇದರೊಂದಿಗೆ ಶಿಕ್ಷಣ ಸಂಸ್ಥೆಯು ದಾಖಲೆಯ ಲಿತಾಂಶದ ವಿಶಿಷ್ಟ ಸಾಧನೆಯ ಶಾಲೆ ಎಂಬ ಹೆಗ್ಗಳಿಕೆೆಗೆ ಪಾತ್ರವಾಗಿದೆ ಎಂದು ಮುಖ್ಯ ಶಿಕ್ಷಕ ಡಿ.ಸಿ.ಮೋಹನ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net