ಪಾಂಗಾಳದಲ್ಲಿ ಸ್ಕೂಟಿ ಸವಾರ ಗಂಭೀರ

accident
Published on

ಪಡುಬಿದ್ರಿ: ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ, ಬೈಂದೂರು ಸಮೀಪದ ಹೇರಂಜಾಲು ಗುಡೇ ದೇವಸ್ಥಾನ ಬಳಿಯ ನಿವಾಸಿ ಮಹೇಶ್ ಮಡಿವಾಳ (30) ಗಂಭೀರ ಗಾಯಗೊಂಡ ಟನೆ ಪಾಂಗಾಳದಲ್ಲಿ ಗುರುವಾರ ಸಂಭವಿಸಿದೆ.

ಮಹೇಶ್ ಸ್ಕೂಟಿಯಲ್ಲಿ ಕಾಪು ಕಡೆಗೆ ಆಗಮಿಸುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಖಾಸಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net