ನಿಲ್ಲಿಸಿದ್ದ ಲಾರಿಯ ಹಿಂಭಾಕ್ಕೆ ಸ್ಕೂಟರ್ ಢಿಕ್ಕಿ ಸವಾರ ಮೃತ್ಯು

accident-15
Published on

ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಕಂಟೇನರ್ ಲಾರಿಯ ಹಿಂಭಾಕ್ಕೆ ಸ್ಕೂಟರ್ ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಗರದ ಹಂಪನಕಟ್ಟೆಯಲ್ಲಿ ಗುರುವಾರ ಸಂಭವಿಸಿದೆ.

ಮ್ಯಾಥ್ಯೂ ಲೀವೋ ಡಿಸೋಜ ಅವರ ಪುತ್ರ ಮೇಲೋರಿ ಶಾನ್ ಡಿಸೋಜ(24) ಮೃತಪಟ್ಟವರು. ಅವರು ಬೆಳಗ್ಗೆ ಸ್ಕೂಟರ್‌ನ್ನು ಬಲ್ಮಠ ಕಡೆಯಿಂದ ಹಂಪನಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸುಮಾರು 7.45ಕ್ಕೆ ಹಂಪನಕಟ್ಟೆಯ ಅರವಿಂದ ಶೋರೂಂ ಎದುರಿನ ಮಾರುತಿ ಸುಜುಕಿ ಅರೇನಾ ಕಟ್ಟಡದ ಬಳಿ ರಸ್ತೆಯಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಢಿಕ್ಕಿ ಹೊಡೆಯಿತು. ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net