WPL: ಮುಂಬೈ ಇಂಡಿಯನ್ಸ್​​ಗೆ ಭರ್ಜರಿ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಪ್ರಗತಿ

web mi vs up
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಇಂಗ್ಲೆಂಡ್​ ತಾರೆ ನ್ಯಾಟ್​ ಸೀವರ್​ ಬ್ರಂಟ್​ (75* ರನ್​, 44 ಎಸೆತ, 13 ಬೌಂಡರಿ ಹಾಗೂ 18ಕ್ಕೆ 3) ಆಲ್ರೌಂಡ್​ ಆಟದ ಬಲದಿಂದ ಮುಂಬೈ ಇಂಂಡಿಯನ್ಸ್​ ತಂಡ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ (ಡಬ್ಲುಪಿಎಲ್​) ಯುಪಿ ವಾರಿಯರ್ಸ್​ ಎದುರು 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್​ಪ್ರೀತ್​ ಕೌರ್​ ಪಡೆ ಡೆಲ್ಲಿ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತ ಯುಪಿ ವಾರಿಯರ್ಸ್​ ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಎರಡನೇ ವಿಕೆಟ್​ಗೆ ಗ್ರೇಸ್​ ಹ್ಯಾರಿಸ್​ (45 ರನ್​, 26 ಎಸೆತ, 6 ಬೌಂಡರಿ, 2 ಸಿಕ್ಸರ್​) ಹಾಗೂ ಕನ್ನಡತಿ ವೃಂದಾ ದಿನೇಶ್​ (33) ನಡೆಸಿದ ಜತೆಯಾಟದಿಂದ ಸುಸ್ಥಿತಿಯಲ್ಲಿತ್ತು. ನಂತರ ದಿಢೀರ್​ ಕುಸಿತ ಕಂಡ ಯುಪಿ ಅಂತಿಮವಾಗಿ 9 ವಿಕೆಟ್​ಗೆ 142 ರನ್​ಗಳ ಪೈಪೋಟಿಯುತ ಮೊತ್ತ ಪೇರಿಸಿತು. ಪ್ರತಿಯಾಗಿ ನ್ಯಾಟ್​ ಸೀವರ್​ ಬ್ರಂಟ್​ ಹಾಗೂ ಹ್ಯಾಲೆ ಮ್ಯಾಥ್ಯೂಸ್​ (59 ರನ್​, 50 ಎಸೆತ, 7 ಬೌಂಡರಿ, 2 ಸಿಕ್ಸರ್​) ಎರಡನೇ ವಿಕೆಟ್​ಗೆ ಇವರಿಬ್ಬರು 82 ಎಸೆತಗಳಲ್ಲಿ 133 ರನ್​ ಕಸಿದ ನೆರವಿನಿಂದ ಮುಂಬೈ ಇಂಡಿಯನ್ಸ್​ 17 ಓವರ್​ಗಳಲ್ಲಿ 2 ವಿಕೆಟ್​ಗೆ 143 ರನ್​ಗಳಿಸಿ ಜಯದ ಸಂಭ್ರಮ ಕಂಡಿತು.

ಯುಪಿ ವಾರಿಯರ್ಸ್​: 9 ವಿಕೆಟ್​ಗೆ 142 (ಕಿರಣ್​ 1, ಗ್ರೇಸ್​ ಹ್ಯಾರಿಸ್​ 45, ವೃಂದಾ ದಿನೇಶ್​ 33, ದೀಪ್ತಿ 4, ತಾಹ್ಲಿಯಾ 1, ಶ್ವೇತಾ 19, ಉಮಾ 13, ಚಿನೆಲ್ಲೆ 7, ಎಕ್ಲೆಸ್ಟೋನ್​ 6, ಕ್ರಾಂತಿ ಗೌಡ್​ 5*, ಸೀವರ್​ ಬ್ರಂಟ್​ 18ಕ್ಕೆ 3, ಸಂಸತಿ 11ಕ್ಕೆ 2, ಶಬ್ನಮ್​ 33ಕ್ಕೆ 2).

ಮುಂಬೈ ಇಂಡಿಯನ್ಸ್​: 17 ಓವರ್​ಗಳಲ್ಲಿ 2 ವಿಕೆಟ್​ಗೆ 143 (ಯಸ್ತಿಕಾ 0, ಮ್ಯಾಥ್ಯೂಸ್​ 59, ಸೀವರ್​ ಬ್ರಂಟ್​ 75*, ಹರ್ಮಾನ್​ಪ್ರೀತ್​ 4*, ದೀಪ್ತಿ ಶರ್ಮ 25ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net