blank

ವಿಜ್ಞಾನಿಗಳ ಚಮತ್ಕಾರ: ಕೇವಲ 24 ಗಂಟೆಯಲ್ಲಿ ಎಂಥದ್ದೇ ಗಾಯವನ್ನು ವಾಸಿ ಮಾಡುತ್ತೆ ಈ ಮ್ಯಾಜಿಕಲ್​ ಸ್ಕಿನ್! Hydrogel​

Hydrogel

Hydrogel : ಇದು ನೋಡಲು ಚರ್ಮದ ರೀತಿ ಇದೆ ಅಷ್ಟೇ ಆದರೆ, ಚರ್ಮವಲ್ಲ. ಆದರೆ, ಇದು ಗಾಯಗಳನ್ನು ಬೇಗನೆ ಗುಣಪಡಿಸುವ ಚರ್ಮ! ಯಾವುದೇ ಗಾಯದ ಶೇ. 90 ರಷ್ಟು ಭಾಗವನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಗುಣಪಡಿಸುತ್ತದೆ ಮತ್ತು 24 ಗಂಟೆಗಳಲ್ಲಿ ಸಂಪೂರ್ಣವಾಗಿ ವಾಸಿ ಮಾಡುತ್ತದೆ. ಇದು ಕೇಳಲು ಯಾವುದೋ ಸೈನ್ಸ್​ ಥ್ರಿಲ್ಲರ್ ಸಿನಿಮಾದ ಕತೆ ಅನಿಸಬಹುದು. ಆದರೆ, ಇದು ಅಕ್ಷರಶಃ ಸತ್ಯ. ಈ ಮ್ಯಾಜಿಕ್​ ಸ್ಕಿನ್​ ಅಥವಾ ಮ್ಯಾಜಿಕ್​ ಚರ್ಮವು ಲಭ್ಯವಾದರೆ, ವೈದ್ಯಕೀಯ ಚಿಕಿತ್ಸೆಯಲ್ಲಿ ಖಂಡಿತವಾಗಿಯೂ ಹೊಸ ಬದಲಾವಣೆ ಆಗುವುದು ಸತ್ಯ. ಚರ್ಮವನ್ನೇ ಹೋಲುವ ಹೊಸ ರೀತಿಯ ಹೈಡ್ರೋಜೆಲ್ ಅನ್ನು ರಚಿಸುವಲ್ಲಿ ವಿಜ್ಞಾನಿಗಳು ಇದೀಗ ಯಶಸ್ವಿಯಾಗಿದ್ದಾರೆ.

ಈ ಹೈಡ್ರೋಜೆಲ್​, ಚರ್ಮದ ಸ್ವಯಂ-ಗುಣಪಡಿಸುವ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಫಿನ್‌ಲ್ಯಾಂಡ್‌ನ ಆಲ್ಟೊ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಬೇರಿಯೂತ್ ವಿಶ್ವವಿದ್ಯಾಲಯದ ಸಂಶೋಧಕರು ರಚಿಸಿದ್ದಾರೆ. ವಾಸ್ತವವಾಗಿ, ಇಂತಹ ಕ್ರಾಂತಿಕಾರಿ ಆವಿಷ್ಕಾರಕ್ಕಾಗಿ ಹಲವು ವರ್ಷಗಳಿಂದ ಪ್ರಪಂಚದಾದ್ಯಂತ ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಅವುಗಳಲ್ಲಿ ಯಾವುದೂ ಇಲ್ಲಿಯವರೆಗೂ ಹೆಚ್ಚು ಯಶಸ್ವಿಯಾಗಿಲ್ಲ. ಇದಕ್ಕೆ ಕಾರಣ ಚರ್ಮದ ವಿಶಿಷ್ಟತೆ.

ಅಂದಹಾಗೆ ಚರ್ಮವು ತನ್ನ ಸ್ಥಿತಿಸ್ಥಾಪಕತ್ವ, ದೀರ್ಘಕಾಲೀನ ಬಾಳಿಕೆ ಮತ್ತು ತೀವ್ರ ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯದಂತಹ ಹಲವು ವಿಶಿಷ್ಟ ಗುಣಗಳನ್ನು ಹೊಂದಿದೆ. ಇವೆಲ್ಲವನ್ನೂ ಮೀರಿ, ಚರ್ಮವು ತನ್ನನ್ನು ತಾನೇ ಗುಣಪಡಿಸಿಕೊಳ್ಳುವ ಅಪ್ರತಿಮ ಸಾಮರ್ಥ್ಯವನ್ನೂ ಹೊಂದಿದೆ. ಈ ಎಲ್ಲ ಗುಣಲಕ್ಷಣಗಳೊಂದಿಗೆ ಕೃತಕ ಚರ್ಮವನ್ನು ವಿನ್ಯಾಸಗೊಳಿಸುವುದು ವಿಜ್ಞಾನಿಗಳಿಗೆ ವರ್ಷಗಳಿಂದ ಒಂದು ಸವಾಲಾಗಿದೆ. ಹೊಸದಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜೆಲ್, ಚರ್ಮದ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ಹೊಂದಿದೆ. ಈ ಜೆಲ್ ಅನ್ನು ಸುಟ್ಟಗಾಯಗಳು ಮತ್ತು ಕಡಿತಗಳಿಗೆ ಹಚ್ಚಿದರೆ, ಅದು ಅವುಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಗುಣಪಡಿಸುತ್ತದೆ.

ಸಾಧಿಸಿದ್ದು ಹೇಗೆ?

ಕೃತಕ ಚರ್ಮವನ್ನು ಅತ್ಯಂತ ತೆಳುವಾದ ನ್ಯಾನೋಶೀಟ್‌ಗಳಿಂದ ಮಾಡಿದ ಪಾಲಿಮರ್ ಸಹಾಯದಿಂದ ರಚಿಸಲಾಗಿದೆ. ಸಂಶೋಧನಾ ತಂಡದ ವಿಜ್ಞಾನಿ ಚೆನ್ ಲಿಯಾಂಗ್ ಅವರು ಮಾನೋಮರ್ ಪುಡಿಯನ್ನು ನೀರು ಆಧಾರಿತ ನ್ಯಾನೋಶೀಟ್‌ಗಳೊಂದಿಗೆ ಬುದ್ಧಿವಂತಿಕೆಯಿಂದ ಬೆರೆಸುವ ಮೂಲಕ ಇದನ್ನು ಸಾಧಿಸಿದ್ದಾರೆ. ನಂತರ, ಈ ಮಿಶ್ರಣವನ್ನು ಅಲ್ಟ್ರಾವೈಲೆಟ್​ ವಿಕಿರಣಕ್ಕೆ ಒಡ್ಡಿದಾಗ ಅದರಲ್ಲಿರುವ ಅಣುಗಳ ನಡುವೆ ಅಪೇಕ್ಷಿತ ಮಟ್ಟದ ಬಂಧವನ್ನು ಸಕ್ರಿಯಗೊಳಿಸಲಾಯಿತು. ಪರಿಣಾಮವಾಗಿ, ಅತ್ಯುತ್ತಮ ಸ್ಥಿತಿಸ್ಥಾಪಕತ್ವವನ್ನು ಹೊಂದಿರುವ ಚರ್ಮದಂತಹ ಹೈಡ್ರೋಜೆಲ್ ಅನ್ನು ರಚಿಸಲಾಯಿತು. ಇದು ಅತ್ಯಂತ ಪರಿಣಾಮಕಾರಿ ಮತ್ತು ಸಂಘಟಿತ ರಚನೆಯನ್ನು ಹೊಂದಿದೆ. ಇದು ಹೈಡ್ರೋಜೆಲ್‌ಗೆ ಶಕ್ತಿಯನ್ನು ನೀಡುವುದಲ್ಲದೆ, ಗಾಯಗಳಿಂದ ಸ್ವತಃ ಗುಣಪಡಿಸುವ ಸಾಮರ್ಥ್ಯವನ್ನು ನೀಡುತ್ತದೆ ಎಂದು ಸಂಶೋಧನಾ ತಂಡ ಹೇಳಿದೆ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್​ಗೆ ಕಹಿ ಸುದ್ದಿ: ಭೂಮಿಗೆ ಮರಳುವುದು ಮತ್ತಷ್ಟು ವಿಳಂಬ, ಕಾರಣ ಹೀಗಿದೆ… Sunita Williams

ಅದರಲ್ಲಿ ಜೈವಿಕ ಕೋಶಗಳನ್ನು ನೋಡಲು ಕಷ್ಟವಾಗಿದ್ದರೂ, ಅವು ಸ್ವಯಂ-ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಗುಣಲಕ್ಷಣಗಳನ್ನು ಸಂಶ್ಲೇಷಿತ ಹೈಡ್ರೋಜೆಲ್‌ಗಳಲ್ಲಿ ಸೇರಿಸುವುದು ಇಲ್ಲಿಯವರೆಗೆ ಒಂದು ಸವಾಲಾಗಿತ್ತು. ನಾವು ಈಗ ಅದನ್ನು ಜಯಿಸಿದ್ದೇವೆ ಎಂದು ಚೆನ್ ಲಿಯಾಂಗ್ ವಿವರಿಸಿದರು. ಇದು ಕೃತಕ ಚರ್ಮದ ತಂತ್ರಜ್ಞಾನದಲ್ಲಿ ಒಂದು ಮೈಲಿಗಲ್ಲು ಎಂದು ಹೇಳಿದರು.

ಇದೀಗ ಸುಟ್ಟಗಾಯಗಳು ಮತ್ತು ದೀರ್ಘಕಾಲದ ಗಾಯಗಳನ್ನು ತ್ವರಿತವಾಗಿ ಗುಣಪಡಿಸುವುದು ಸುಲಭವಾಗುತ್ತದೆ. ಇದು ವೈದ್ಯಕೀಯ ಚಿಕಿತ್ಸೆಯಲ್ಲಿ ಮಾತ್ರವಲ್ಲದೆ ಪ್ರಾಸ್ಥೆಟಿಕ್ಸ್, ಸಾಫ್ಟ್ ರೊಬೊಟಿಕ್ಸ್ ಮತ್ತು ಇತರ ಕ್ಷೇತ್ರಗಳಲ್ಲಿಯೂ ಉಪಯುಕ್ತವಾಗಿರುತ್ತದೆ ಎಂದು ಚೆನ್ ಲಿಯಾಂಗ್ ಅವರು ವಿವರಿಸಿದರು. ಈ ಜೆಲ್ ಸುಮಾರು 10,000 ನ್ಯಾನೊಮೀಟರ್‌ಗಳನ್ನು ಹೊಂದಿರುತ್ತದೆ. ಪರಿಣಾಮವಾಗಿ, ಇದು ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಎರಡನ್ನೂ ಹೊಂದಿದೆ. ಈ ಪವಾಡಯುತ ಜೆಲ್ ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದೆ. ಇದು ವೈದ್ಯಕೀಯದಲ್ಲಿ ಸಂಪೂರ್ಣವಾಗಿ ಲಭ್ಯವಾಗಲು ಐದು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಧ್ಯಯನದ ವಿವರಗಳನ್ನು ಪ್ರತಿಷ್ಠಿತ ಜರ್ನಲ್ ನೇಚರ್ ಮೆಟೀರಿಯಲ್ಸ್‌ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ಹೈಡ್ರೋಜೆಲ್ ಎಂದರೇನು?

ಸರಳವಾಗಿ ಹೇಳುವುದಾದರೆ, ಇದು ಜೆಲ್​ನಂತಹ ಮೃದುವಾದ ವಸ್ತುವಾಗಿದೆ. ಇದು ಪಾಲಿಮರ್‌ಗಳು ಮತ್ತು ಇತರ ವಸ್ತುಗಳಿಂದ ಮಾಡಲ್ಪಟ್ಟಿದೆ. ಕೂದಲಿನ ಚಿಕಿತ್ಸೆಯಿಂದ ಹಿಡಿದು ಆಹಾರ ಉತ್ಪನ್ನಗಳವರೆಗೆ ಬಹುತೇಕ ಎಲ್ಲದರಲ್ಲೂ ಅವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. (ಏಜೆನ್ಸೀಸ್​)

ಸುನಿತಾ ವಿಲಿಯಮ್ಸ್​ಗೆ ಕಹಿ ಸುದ್ದಿ: ಭೂಮಿಗೆ ಮರಳುವುದು ಮತ್ತಷ್ಟು ವಿಳಂಬ, ಕಾರಣ ಹೀಗಿದೆ… Sunita Williams

50 ವರ್ಷದ ನಂತರ ರೂಪುಗೊಳ್ಳುವ ಚತುರ್ಗ್ರಹ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Share This Article

ಈ ಆಹಾರ ಪದ್ಧತಿಗಳು ಕಿಡ್ನಿ ಸ್ಟೋನ್​ಗೆ ಕಾರಣವಾಗುತ್ತವೆ ಎಚ್ಚರ! ಈ ತಪ್ಪುಗಳನ್ನು ಎಂದಿಗೂ ಮಾಡ್ಬೇಡಿ…Kidney Stones

Kidney Stones : ಅದು ಪಾಸಿಟಿವ್​ ಆಗಿರಲಿ ಅಥವಾ ನೆಗೆಟಿವ್​ ಆಗಿರಲಿ ಯಾವುದೇ ಆಹಾರ ಪದ್ಧತಿ…

ಮತ್ತೆ ಒಕ್ಕರಿಸಿದ ಕೊರೊನಾ ವೈರಸ್‌: ನೀವು ಮತ್ತು ನಿಮ್ಮ ಕುಟುಂಬ ಹೇಗೆ ಕಾಳಜಿ ವಹಿಸಬೇಕು ಗೊತ್ತಾ? coronavirus

coronavirus : ಕೊರೊನಾ ವೈರಸ್‌ನ ಹೊಸ ರೂಪಾಂತರವು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಈ ರೂಪಾಂತರದ ಹೆಚ್ಚು  ಪ್ರಕರಣಗಳು…

ಈ 5 ಬೆಳ್ಳಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ರೆ ಅದೃಷ್ಟ ಖಂಡಿತವಾಗಿಯೂ ನಿಮಗೆ ಬರುತ್ತದೆ! silver gifts

silver gifts: ಬೆಳ್ಳಿಯು ಚಂದ್ರ ಮತ್ತು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಎಂದು ಹಿರಿಯರು ಹೇಳುತ್ತಾರೆ. ಯಾರಿಗಾದರೂ…