ಸೆಪ್ಟಂಬರ್​​ಗೆ ಶಾಲಾ- ಕಾಲೇಜು ಆರಂಭ; ಮತ್ತೊಂದು ರಾಜ್ಯ ಸೇರ್ಪಡೆ

School
Published on

ನವದೆಹಲಿ: ಕೇಂದ್ರ ಸರ್ಕಾರ ಅನ್​ಲಾಕ್​ 3.0 ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸದ್ಯಕ್ಕೆ ಆಗಸ್ಟ್​ 13ರ ವರೆಗೆ ಶಾಲಾ- ಕಾಲೇಜು ಆರಂಭಕ್ಕೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಇದರ ಹೊರತಾಗಿಯೂ ಹಲವು ರಾಜ್ಯಗಳು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಚಿಂತನೆ ನಡೆಸಿವೆ. ಏಕೆಂದರೆ, ಸೆ.30ರೊಳಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್​ಗಳ ಅಂತಿಮ ಸೆಮಿಸ್ಟರ್​ ಅಥವಾ ವರ್ಷದ ಪರೀಕ್ಷೆ ಮುಗಿಸಬೇಕಾದ ಸವಾಲು ಕೂಡ ಎದುರಿಗಿದೆ.

ಆಂಧ್ರಪ್ರದೇಶದಲ್ಲಿ ಸೆಪ್ಟಂಬರ್​ 5ರಂದು ಶಾಲಾ-ಕಾಲೇಜುಗಳು ಆರಂಭವಾಗಲಿವೆ ಎಂದು ಈಗಾಗಲೇ ಶಿಕ್ಷೀನ ಸಚಿವ ಆದಿಮುಲಪು ಸುರೇಶ್​ ಘೋಷಿಸಿದ್ದಾರೆ. ಇದೀಗ ಈ ಸಾಲಿಗೆ ಅಸ್ಸಾಂ ಕೂಡ ಸೇರಿಕೊಂಡಿದೆ.

ಸೆಪ್ಟಂಬರ್​ 1ರಂದು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅಸ್ಸಾಂ ಯೋಜನೆ ರೂಪಿಸಿದೆ. ಆಧರೆ, ಅಂತಿಮ ನಿರ್ಧಾರ ಕೇಂದ್ರದ ಮಾರ್ಗಸೂಚಿಗಳನ್ನೇ ಆಧರಿಸಿರಲಿದೆ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಶಿಕ್ಷಣ ಸಚಿವ ಹಿಮಾಂತಾ ಬಿಸ್ವ ಸರ್ಮಾ ಮಾಹಿತಿ ನೀಡಿದ್ದಾರೆ.

ಆಂಧ್ರದಲ್ಲಿ ಕಳೆದ 3 ದಿನಗಳಿಂದ 30 ಸಾವಿರಕ್ಕೂ ಅಧಿಕ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಅಲ್ಲಿಯೂ ಶಿಕ್ಷಣ ಸಂಸ್ಥೆಗಳ ಆರಂಭದ ಬಗ್ಗೆ ಮತ್ತೆ ಅನಿಶ್ಚಿತತೆ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net