

Video Viral: ಚಿಕ್ಕ ಮಕ್ಕಳಿಗೆ ಬೇಸಿಗೆಯ ರಜೆ ಎಂದರೆ ಬಹಳ ಅಚ್ಚುಮೆಚ್ಚು. ಗೆಳೆಯರೆಲ್ಲರೂ ಸೇರಿ ಆಟ ಆಡುವುದು, ಸುತ್ತಾಡುವುದರ ಜೊತೆಗೆ ಶಾಲೆಯಲ್ಲಿ ಟೀಚರ್ಸ್ ಕೊಟ್ಟ ಹೋಮ್ವರ್ಕ್ನ್ನು ಕೂಡಾ ಎಲ್ಲರೂ ಜೊತೆಯಲ್ಲಿ ಸೇರಿಯೇ ಮುಗಿಸುತ್ತಾರೆ. ಅದರೆ ಈ ರಜೆಯಲ್ಲಿ ಪಾಠಕ್ಕಿಂತ ಆಟಾನೇ ಹೆಚ್ಚಿರುವುದಂತೂ ಖಂಡಿತ. ಅದರೆ ರೀತಿ ಇಲ್ಲೊಬ್ಬ ಹುಡುಗ ಬೇಸಿಗೆ ರಜೆ ಮುಗಿಸಿದ ನಂತರ ತನ್ನೆಲ್ಲಾ ಆಟಿಕೆಗಳಿಗೆ ವಿದಾಯ ಹೇಳಿದ ಭಾವನಾತ್ಮಕ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇತ್ತೀಚೆಗೆ ಆನ್‌ಲೈನ್‌ನಲ್ಲಿ ವೈರಲ್ ಆದ ವಿಡಿಯೋ ಒಬ್ಬ ಶಾಲಾ ಬಾಲಕ 'ವಿದಾಯಿ ಸಮಾರಂಭ'ವಾಗಿದೆ. ಹಿಂದೂ ವಧುಗಳು ತಮ್ಮ ತವರು ಮನೆಗಳಿಂದ ಹೊರಡುವ ಮೊದಲು 'ಅಕ್ಕಿ' ಎಸೆಯುವ ವಿಶಿಷ್ಟ 'ವಿದಾಯಿ ಸಮಾರಂಭ'ವಿದೆ. ಅದೇ ರೀತಿ ಈ ಮಗು ಕೂಡ ತನ್ನ ಶಾಲಾ ಸಮವಸ್ತ್ರವನ್ನು ಧರಿಸಿ ತನ್ನ ಆಟಿಕೆಗಳನ್ನು ಹಿಂದಕ್ಕೆ ಎಸೆದಿರುವ ವಿಡಿಯೋ ವೈರಲ್ ಆಗಿದೆ.
ಈ ಪೋಸ್ಟ್ ವೈರಲ್ ಆದ ನಂತರ 30,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ, ಹಲವರು ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್)