

ಪಡುಬಿದ್ರಿ: ಪ್ರಜಾಪ್ರಭುತ್ವದ ಮಹತ್ವ ಸರಿಯಾಗಿ ಅರ್ಥಮಾಡಿಕೊಂಡು ಬಲಿಷ್ಠ ರಾಷ್ಟ್ರ ಕಟ್ಟಲು ಶಾಲಾ ಸಂಸತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ ಬೆಳೆಸುತ್ತದೆ ಎಂದು ಪಡುಬಿದ್ರಿ ಗಣಪತಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಅನುರಾಧಾ ಪಿ.ಎಸ್.ಹೇಳಿದರು.
ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಶನಿವಾರ ಶಾಲಾ ಸಂಸತ್ತಿನ ಮೊದಲ ಅಧಿವೇಶನ ಮತ್ತು ವಿವಿಧ ಸಂಘಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಭಾಪತಿಯಾಗಿ ಆಯ್ಕೆಯಾದ ಕವನಾ ಸಂಸತ್ತಿನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಚುನಾವಣೆಯಲ್ಲಿ ಜಯಶಾಲಿಯಾದ ಪ್ರತೀಕ್ಷಾ ಶಾಲಾ ನಾಯಕಿಯಾಗಿ, ಭೂಮಿಕಾ ರಾವ್ ಪ್ರತಿಪಕ್ಷದ ನಾಯಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಮಾಜವಿಜ್ಞಾನ ಶಿಕ್ಷಕಿ ರಕ್ಷಿತಾ ಮಾರ್ಗದರ್ಶಕರಾಗಿದ್ದರು. ಶಾಲೆ ಸಾಂಸ್ಕೃತಿಕ , ಕ್ರೀಡಾ, ಸಾಹಿತ್ಯ, ಗಣಿತ, ವಿಜ್ಞಾನ, ಕಲಾ ಸಂಘದ ಸದಸ್ಯರು ಸಂಘದ ಚಟುವಟಿಕೆಗಳನ್ನು ಶ್ರದ್ಧೆಯಿಂದ ಮಾಡುವುದಾಗಿ ಪ್ರತಿಜ್ಞೆ ಕೈಗೊಂಡರು.