More

    ಛೇ, ಇದೆಂಥಾ ಶಾಲೆ?! ಚೇಷ್ಟೆ ಮಾಡಿದ ವಿದ್ಯಾರ್ಥಿಯನ್ನು ನೇತಾಡಿಸಿ ಶಿಕ್ಷೆ!

    ಲಖನೌ: ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಚೇಷ್ಟೆ ಮಾಡಿದನೆಂದು ಮೊದಲನೇ ಮಹಡಿಯಿಂದ ಆತನ ಕಾಲು ಹಿಡಿದು ತಲೆಕೆಳಗಾಗಿ ನೇತಾಡಿಸಿ ಶಿಕ್ಷೆ ನೀಡಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕೃತ್ಯದ ಚಿತ್ರವು ವೈರಲ್​ ಆದ ಬೆನ್ನಲ್ಲೇ ಸ್ಥಳೀಯ ಪೊಲೀಸರು ಸಂಬಂಧಿತ ಶಾಲೆಯ ಸಂಚಾಲಕನನ್ನು ಬಂಧಿಸಿದ್ದಾರೆ.

    ಅ.27 ರಂದು 5 ವರ್ಷ ವಯಸ್ಸಿನ ನರ್ಸರಿ ವಿದ್ಯಾರ್ಥಿ ಸೋನೂ ಊಟದ ಬ್ರೇಕ್​ ವೇಳೆ ಇತರರಿಗೆ ಚೇಷ್ಟೆ ಮಾಡಿದ ಹಿನ್ನೆಲೆಯಲ್ಲಿ ಶಾಲೆಯ ಸಂಚಾಲಕ ಮನೋಜ್​ ವಿಶ್ವಕರ್ಮ, ಆತನನ್ನು ಮೊದಲನೇ ಮಹಡಿಯಿಂದ ಕಾಲು ಹಿಡಿದು ಕೆಳಕ್ಕೆ ನೇತಾಡಿಸಿದ್ದಾರೆ. ಬಾಲಕನನ್ನು ಈ ರೀತಿ ವಿಚಿತ್ರವಾಗಿ ಬೆದರಿಸುತ್ತಿರುವಾಗ ಶಾಲೆಯ ಇತರ ಮಕ್ಕಳು ನಿಂತು ನೋಡುತ್ತಿರುವ ಚಿತ್ರವು ವೈರಲ್​ ಆಗಿದೆ.

    ಇದನ್ನೂ ಓದಿ: ಕಣ್ಣೀರ ಕಡಲಲ್ಲಿ ಕರುನಾಡು: ಬದುಕಿನ ಪಯಣ ಮುಗಿಸಿದ ‘ರಾಜಕುಮಾರ’

    ಈ ಘಟನೆಯು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಹ್ರೌರ ಪ್ರದೇಶದ ಸದ್ಭಾವನಾ ಶಿಕ್ಷಣ ಸಂಸ್ಥಾನ್ ಶಾಲೆಯಲ್ಲಿ ನಡೆದಿದ್ದು, ಈ ಬಗ್ಗೆ ಬಾಲಕ ಸೋನುವಿನ ತಂದೆ ರಣಜೀತ್​ ಯಾದವ್​ ಪೊಲೀಸರಿಗೆ ದೂರು ನೀಡಿದ್ದಾರೆ. ಸದರಿ ಶಾಲಾ ಸಂಚಾಲಕನನ್ನು ಬಂಧಿಸಿರುವ ಅಹ್ರೌರಾ ಪೊಲೀಸರು, ಜುವಿನೈಲ್​ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

    ಇನ್ನು ಈ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ! ವರ್ಷಕ್ಕೆ ಒಂದೂವರೆ ಲಕ್ಷ ರೂ. ಮಾತ್ರ

    “ಹಿಂದೂಗಳ ಮೇಲೆ ಯೋಜನಾಬದ್ಧ ದಾಳಿ! ಬಾಂಗ್ಲಾ ಹಿಂಸಾಚಾರದ ಬಗ್ಗೆ ವಿಶ್ವ ಸಂಘಟನೆಗಳ ಮೌನವೇಕೆ?”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts