ಶಾಲೆಯಲ್ಲಿ ಶಿಸ್ತು ಪಾಲನೆ ಕಾನೂನಿನ ಭಾಗ

kanunu
Published on

ಹೆಬ್ರಿ: ಅಪ್ರಾಪ್ತರಿಗೆ ವಾಹನ ನೀಡಿದರೆ ಪಾಲಕರು ಜವಾಬ್ದಾರಾಗಿರುತ್ತಾರೆ. ವಿದ್ಯಾರ್ಥಿಗಳು ಗುಡ್ ಹಾಗೂ ಬ್ಯಾಡ್ ಟಚ್‌ಗಳ ಬಗ್ಗೆ ಎಚ್ಚರವಹಿಸಿ, ಅಂತಹ ಪ್ರಕರಣ ಬಂದಲ್ಲಿ ಇಲಾಖೆ ಗಮನಕ್ಕೆ ತರಬೇಕು. ಶಾಲೆಯಲ್ಲಿ ಶಿಸ್ತು ಪಾಲನೆ ಕೂಡ ಕಾನೂನಿನ ಒಂದು ಭಾಗ ಎಂದು ಹೆಬ್ರಿ ಪಿಎಸ್‌ಐ ಮಹೇಶ್ ಟಿ.ಎಂ. ಹೇಳಿದರು.

ಶಾಂತಿನಿಕೇತನ, ಹೆಬ್ರಿ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ಹೆಬ್ರಿ ಪೊಲೀಸ್ ಠಾಣಾ ಸಹಕಾರದೊಂದಿಗೆ ಕುಚ್ಚೂರು ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆನಲ್ಲಿ ಗುರುವಾರ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಎಸ್‌ಐ ದಯಕರ ಪ್ರಸಾದ್ ಪೋಲಿಸ್ ಇಲಾಖೆ ತೆರೆದ ಮನೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ರಾಮಕೃಷ್ಣ ಆಚಾರ್, ಪ್ರಭಾರ ಮುಖ್ಯ ಶಿಕ್ಷಕಿ ತುಳಸಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿಇಒ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಅಗತ್ಯವಾಗಿ ಆಗಬೇಕಾಗಿದೆ. ಶಾಂತಿನಿಕೇತನದವರು ವಿಶೇಷ ಮುತುವರ್ಜಿ ವಹಿಸಿ ಈ ಶಾಲೆಯಲ್ಲಿ ಕಾರ್ಯಕ್ರಮ ಮಾಡಿರುವುದಕ್ಕೆ ಅಭಿನಂದನೆ. -ರಾಮಕೃಷ್ಣ ಆಚಾರ್ ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ https://www.vijayavani.net/bus-stop-not-responding-to-demand https://www.vijayavani.net/prize-in-state-level-competition

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net