

ಪುತ್ತೂರು ಗ್ರಾಮಾಂತರ: ರೆಂಜಲಾಡಿಯ ಸ್ಪೋರ್ಟಿಂಗ್ ಕ್ಲಬ್ ವತಿಯಿಂದ ಸರ್ವೆ ಕಲ್ಪಣೆ ಸರ್ಕಾರಿ ಪ್ರೌಢಶಾಲೆಗೆ ಸಿಸಿ ಕ್ಯಾಮರಾವನ್ನು ಕೊಡುಗೆಯಾಗಿ ನೀಡಿದ್ದು, ಸ್ಪೋರ್ಟಿಂಗ್ ಕ್ಲಬ್ ಉಪಾಧ್ಯಕ್ಷ ಹಾರಿಸ್ ಕೂಡುರಸ್ತೆ ಶಾಲೆಗೆ ಹಸ್ತಾಂತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ.ಹನೀಫ್ ರೆಂಜಲಾಡಿ ಮಾತನಾಡಿ, ಸಿಸಿ ಕ್ಯಾಮರಾ ಅಳವಡಿಸಬೇಕೆಂಬುವುದು ಶಾಲೆಯ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಸ್ಪೋರ್ಟಿಂಗ್ ಕ್ಲಬ್ ಈಡೇರಿಸಿದ್ದು, ಇದು ನಮ್ಮ ಶಾಲೆಯ ಸುರಕ್ಷತೆಯ ದೃಷ್ಟಿಯಿಂದ ಬಹಳ ಪ್ರಯೋಜನಕಾರಿಯಾಗಲಿದೆ. ಹಿರಿಯ ವಿದ್ಯಾರ್ಥಿಗಳು ಶಾಲೆಯ ಜತೆ ನಿರಂತರ ಸಂಪರ್ಕದಲ್ಲಿದ್ದರೆ ಶಾಲೆ ಅಭಿವೃದ್ಧಿ ಹೊಂದುತ್ತದೆ ಎಂದರು.
ಮುಂಡೂರು ಗ್ರಾ.ಪಂ ಸದಸ್ಯರಾದ ಕರುಣಾಕರ ಗೌಡ ಎಲಿಯ, ಮಹಮ್ಮದ್ ಆಲಿ ನೇರೋಳ್ತಡ್ಕ, ಕಲ್ಪಣೆ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿ, ಸರ್ವೆ ಕಲ್ಪಣೆ ಪ್ರೌಢ ಶಾಲೆಯ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಕಲ್ಪಣೆ ಆದಿ ಬ್ರಹ್ಮ ಮೊಗೇರ್ಕಳ ಸೇವಾ ಸಮಿತಿಯ ಅಧ್ಯಕ್ಷ ಗಣೇಶ್ ನೇರೋಳ್ತಡ್ಕ, ರೆಂಜಲಾಡಿ ಸ್ಪೋರ್ಟಿಂಗ್ ಕ್ಲಬ್‌ನ ಅಧ್ಯಕ್ಷ ಹಾರಿಸ್ ಕೂಡುರಸ್ತೆ ಮಾತನಾಡಿದರು.
ಸಿ.ಸಿ ಕ್ಯಾಮರಾ ಕೊಡುಗೆ ನೀಡಿದ ಸ್ಪೋರ್ಟಿಂಗ್ ಕ್ಲಬ್‌ಗೆ ಶಾಲೆಯ ವತಿಯಿಂದ ಸ್ಮರಣಿಕೆ ನೀಡಲಾಯಿತು. ಸ್ಪೊರ್ಟಿಂಗ್ ಕ್ಲಬ್ ಉಪಾಧ್ಯಕ್ಷ ಹಾರಿಸ್ ಕೂಡುರಸ್ತೆ ಮತ್ತು ಸದಸ್ಯರಾದ ಕಮರುದ್ದೀನ್ ರೆಂಜಲಾಡಿ, ಮುಸ್ತಫಾ ರೆಂಜಲಾಡಿ ಹಾಗೂ ಮುನ್ನ ಸೊರಕೆ ಸ್ಮರಣಿಕೆ ಸ್ವೀಕರಿಸಿದರು. ಶಾಲಾ ಮುಖ್ಯಶಿಕ್ಷಕಿ ಕಮಲಾ ಸ್ವಾಗತಿಸಿದರು. ಶಿಕ್ಷಕರಾದ ಸತೀಶ್, ಉಮಾವತಿ ಮತ್ತು ಅವಿತಾ ನಿರೂಪಿಸಿದರು.