ಶಾಲಾ ಕಟ್ಟಡಕ್ಕೆಂದು ತೆಗಿದಿದ್ದ ಪಿಲ್ಲರ್ ಗುಂಡಿಯಲ್ಲಿ ಬಿದ್ದು ಮೂವರು ಮಕ್ಕಳ ದಾರುಣ ಸಾವು..!

Death
Published on

ಹಾವೇರಿ: ಶಾಲಾ ಆವರಣದ ಗುಂಡಿಯಲ್ಲಿ ಬಿದ್ದು ಮೂವರು ಮಕ್ಕಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬ್ಯಾಡಗಿ ಪಟ್ಟಣದ 2ನೇ ನಂಬರ್ ಉರ್ದು ಶಾಲೆಯಲ್ಲಿ ಶನಿವಾರ ನಡೆದಿದೆ.

ಅಜ್ಮೀರ್ ಹಾವಣಗಿ (8), ಮೊಹಮ್ಮದ್ ಹಾವಣಗಿ (10) ಮತ್ತು ಸೈಯದ್ ಹಾವಣಗಿ (6) ಮೃತ ಬಾಲಕರು. ಇಬ್ಬರು ಬಾಲಕರು ದೇವಿಹೊಸೂರು ಗ್ರಾಮದವರು. ಮತ್ತೊಬ್ಬ ಬ್ಯಾಡಗಿ ನಿವಾಸಿ. ಗುಂಡಿಯಲ್ಲಿದ್ದ ಮಳೆ ನೀರಲ್ಲಿ ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ.

ಆಟವಾಡಲು ಸ್ನೇಹಿತರೊಂದಿಗೆ ಶಾಲಾ ಆವರಣಕ್ಕೆ ತೆರಳಿದ್ದರು. ಈ ವೇಳೆ ಶಾಲಾ ಕಟ್ಟಡಕ್ಕೆಂದು ತೆಗಿದಿದ್ದ ಪಿಲ್ಲರ್ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರತೆಗೆದಿದ್ದಾರೆ.

ಮಕ್ಕಳನ್ನು ಕಳೆದುಕೊಂಡ ಪಾಲಕರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳ ಪರಿಶೀಲಿಸಿರುವ ಬ್ಯಾಡಗಿ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net