

ಶ್ರೀನಗರ: ಕಳೆದ ತಿಂಗಳಷ್ಟೇ ಅಕ್ಷಯ್ ಕುಮಾರ್ ಕಾಶ್ಮೀರಕ್ಕೆ ಹೋಗಿ, ಅಲ್ಲಿ ಬಾರ್ಡ್ರ್ ಸೆಕ್ಯುರಿಟಿ ಯೋಧರ (ಬಿಎಸ್ಎಫ್) ಯೋಧರ ಜತೆಗೆ ಒಂದು ದಿನ ಕಳೆದು ಬಂದಿದ್ದು ಗೊತ್ತಿದೆಯಲ್ಲ? ಯೋಧರ ಜತೆಗಿನ ಹಲವು ಫೋಟೋಗಳನ್ನು ಅಕ್ಷಯ್ ಕುಮಾರ್, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಅಲ್ಲಿ ಶಾಲೆಯೊಂದರ ನಿರ್ಮಾಣಕ್ಕೆ ಒಂದು ಕೋಟಿ ದೇಣಿಗೆ ಕೊಟ್ಟಿದ್ದರು.
ಇದನ್ನೂ ಓದಿ: ಲೀಕ್ ಆಯ್ತು ಕೃತಿ ಸನೋನ್ ಅಭಿನಯದ ಮಿಮಿ
ಈಗ ಆ ಶಾಲೆಯ ಶಂಕುಸ್ಥಾಪನೆ ಮಂಗಳವಾರ ಸದ್ದಿಲ್ಲದೆ ಮುಗಿದಿದೆ. ಈ ಶಂಕುಸ್ಥಾಪನೆ ಕಾರ್ಯಕ್ರಮವು ವರ್ಚ್ಯುಯಲ್ ಆಗಿ ನಡೆದಿದ್ದು, ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಸಹ ಭಾಗವಹಿಸಿದ್ದಾರೆ. ವಿಶೇಷವೆಂದರೆ, ಸರ್ಕಾರಿ ಶಾಲೆಯಲ್ಲಿ ಒಂದು ಪ್ರತ್ಯೇಕ್ ಬ್ಲಾಕ್ ನಿರ್ಮಿಸಲಾಗುತ್ತಿದ್ದು, ಅದಕ್ಕೆ ಅಕ್ಷಯ್ ಕುಮಾರ್ ಅವರ ತಂದೆಯ ಹೆಸರನ್ನು ಇಡಲಾಗಿದೆ. ಆ ವಿಭಾಗಕ್ಕೆ ಹರಿ ಓಂ ಭಾಟಿಯ ಎಜುಕೇಶನ್ ಬ್ಲಾಕ್ ಎಂದು ನಾಮಕರಣ ಮಾಡಲಾಗಿದೆ.
ಇದನ್ನೂ ಓದಿ: ರಜನಿಕಾಂತ್-ದೀಪಿಕಾ ಪಡುಕೋಣೆ ರೊಮ್ಯಾನ್ಸ್
ಈ ಕುರಿತು ಕಾಶ್ಮೀರದ ಬಿಎಸ್ಎಫ್ ಘಟಕವು ಟ್ವೀಟ್ ಮಾಡಿದ್ದು, ಇಂದು ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಹರಿ ಓಂ ಭಾಟಿಯಾ ಎಚುಕೇಶನ್ ಬ್ಲಾಕ್ಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್, ಬಿಎಸ್ಎಫ್ನ ಡಿಜಿ ರಾಕೇಶ್ ಅಸ್ತಾನಾ ಸೇರಿದಂತೆ ಹಲವರು ಹಾಜರಿದ್ದರು ಎಂದು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿದೆ.
ಶಚಹ