ಸಮಸ್ಯೆಗಳಿದ್ದಲ್ಲಿ ಇಲಾಖೆ ಗಮನಕ್ಕೆ ತನ್ನಿ : ಎಸ್‌ಐ ಸಂತೋಷ್ ಸಲಹೆ

sabhe (1)
Published on

ಸುಳ್ಯ: ನಗರದ ಪೊಲೀಸ್ ಠಾಣೆಯಲ್ಲಿ ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆ ಭಾನುವಾರ ನಡೆಯಿತು. ಠಾಣಾ ಉಪನಿರೀಕ್ಷಕ ಸಂತೋಷ್ ಮಾತನಾಡಿ, ಮನೆಯ ಪರಿಸರದಲ್ಲಿ ಅಥವಾ ಕಾಲನಿಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬಾರದು. ಪ್ರತಿಭಟನೆ, ಮೆರವಣಿಗೆ ಮುಂತಾದ ಕಾರ್ಯಕ್ರಮ ಮಾಡುವಾಗ ನಿಯಮ ಪಾಲಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

ಹಲವು ಕಡೆ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದ್ದು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖಂಡ ಸುಂದರ ಪಾಟಾಜೆ ಮನವಿ ಮಾಡಿದರು. ಮುಖಂಡ ಸತೀಶ್ ಬೂಡುಮಕ್ಕಿ ಮಾತನಾಡಿ, ಕೆಲವು ಮೈಕ್ರೋಫೈನಾನ್ಸ್ ಸಂಸ್ಥೆಯವರು ಸಾಲ ಮರುಪಾವತಿ ವಿಷಯಕ್ಕಾಗಿ ರಾತ್ರಿ ವೇಳೆ ಮನೆಗಳಿಗೆ ಬಂದು ಸಮಸ್ಯೆ ಕೊಡುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ದೊಡ್ಡೇರಿ ತೂಗುಸೇತುವೆಯ ತಡೆ ಬೇಲಿ ಮುರಿದು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದರು. ಸಭೆಯಲ್ಲಿ ಹಲವು ವಿಚಾರ ಪ್ರಸ್ತಾಪವಾದವು. ಎಲ್ಲಕ್ಕೂ ಕಾನೂನಿನ ಚೌಕಟ್ಟಿನಡಿ ಪರಿಹಾರ ನೀಡುವ ಭರವಸೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net