ಗೋವಾ ರಾಜ್ಯಪಾಲರು ಮೇಘಾಲಯಕ್ಕೆ, ಮಹಾ ರಾಜ್ಯಪಾಲರಿಗೆ ಗೋವಾ ಹೆಚ್ಚುವರಿ ಹೊಣೆಗಾರಿಕೆ

satya pal malik
Published on

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಗೋವಾ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲ್ಲಿಕ್ ಅವರನ್ನು ಮೇಘಾಲಯ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ. ಮಹಾರಾಷ್ಟ್ರದ ಗವರ್ನರ್​ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಗೋವಾ ರಾಜ್ಯಪಾಲರ ಹೆಚ್ಚುವರಿ ಹೊಣೆಗಾರಿಕೆ ಲಭ್ಯವಾಗಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ರಾಷ್ಟ್ರಪತಿ ಭವನ, ಅವರು ಅಲ್ಲಿ ಅಧಿಕಾರ ಸ್ವೀಕರಿಸಿದ ಕೂಡಲೇ ಈ ಆದೇಶ ಜಾರಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ. ಸತ್ಯಪಾಲ್ ಮಲ್ಲಿಕ್ ಅವರು ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರಾಗಿದ್ದವರು.

ಮೇಘಾಲಯದಲ್ಲಿ ರಾಜ್ಯಪಾಲರಾಗಿದ್ದ ತಥಾಗತ ರಾಯ್ ಅವರ ಐದು ವರ್ಷಗಳ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ವರ್ಗಾವಣೆ ಆಗಿದೆ. ತಥಾಗತ ರಾಯ್​ ಅವರು ಆರಂಭದ ಮೂರು ವರ್ಷ ತ್ರಿಪುರಾದಲ್ಲಿ ರಾಜ್ಯಪಾಲರಾಗಿದ್ದರೆ, ಇನ್ನುಳಿದ ಅವಧಿ ಮೇಘಾಲಯದಲ್ಲಿ ಆಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net