VIDEO: ಕುರಿ ಕಾಯೋಕೆ ಹೊಂಟ್ರು ಸತೀಶ್​ ನೀನಾಸಂ!

Sathish
Published on

ಲಾಕ್​ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿದೆ. ಸಿನಿಮಾ ಬಿಡುಗಡೆ ಯಾವಾಗ ಎಂಬುದೇ ಗೊತ್ತಿಲ್ಲ. ಹೀಗಿರುವಾಗ ಒಂದಷ್ಟು ಸಿನಿಮಾ ಮಂದಿ ತಮ್ಮ ನಟನೆ ವೃತ್ತಿಯನ್ನು ಬದಿಗಿಟ್ಟು ಹೊಟ್ಟೆಪಾಡಿಗಾಗಿ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ಸ್ಯಾಂಡಲ್​ವುಡ್ ನಟ ಸತೀಶ್ ನೀನಾಸಂ ಕಾಡಲ್ಲಿ ಕುರಿ ಹಿಂಡಿನೊಂದಿಗೆ ನಿಂತಿದ್ದಾರೆ.

ಅಂದರೆ, ಕುರಿ ಕಾಯುವ ಕೆಲಸ ಶುರುವಿಟ್ಟುಕೊಂಡಿದ್ದಾರೆ. ಹೌದು, ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟು, ಕುರಿಗಳ ನಡುವೆ ಕಾಲ ಕಳೆಯುತ್ತಿರುವ ಸತೀಶ್​, ಇತ್ತೀಚೆಗಷ್ಟೇ ಒಂದ್​ ಕಥೆ ಹೇಳ್ತಿನಿ, ಕೇಳ್ತಿರಾ ಎಂಬ ಕಥಾ ಸರಣಿಯನ್ನು ಆರಂಭಿಸಿದ್ದರು. ಅದರಂತೆ ಐದು ರೂಪಾಯಿ ಡಾಕ್ಟ್ರು ಎಂಬ ಕಥೆಯನ್ನೂ ಸೋಮವಾರ ಹೇಳಿದ್ದರು. ಇದೀಗ ಅದರ ಜತೆಗೆ ಕುರಿ ಕಾಯುವ ವಿಡಿಯೋ ಹಾಕಿ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net