ಕಾಂಗ್ರೆಸ್‌ನಿಂದ ಹಿಂದು ಸಮಾಜಕ್ಕೆ ಅನ್ಯಾಯ : ಡಾ.ಪ್ರಭಾಕರ ಭಟ್ ಕಲ್ಲಡ್ಕ ಆರೋಪ

shashti
Published on

ಉಪ್ಪಿನಂಗಡಿ: ಕಾಂಗ್ರೆಸ್ ತುಷ್ಟೀಕರಣ ನೀತಿಯಿಂದ ಹಿಂದು ಸಮಾಜಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಕಾಲಘಟ್ಟ ನಿರ್ಮಾಣವಾಗಿದೆ. ವಂದೇ ಮಾತರಂ ಗೀತೆಯನ್ನು ತುಂಡರಿಸಿದ್ದರಿಂದ ಹಿಡಿದು ನಾಗಮಂಗಲದ ದಾಳಿ ಪ್ರಕರಣದವರೆಗೆ ಕಾಂಗ್ರೆಸ್ ಮುಸ್ಲಿಂ ಸಮುದಾಯ ಓಲೈಸಲು ಹಿಂದು ಸಮಾಜಕ್ಕೆ ಅನ್ಯಾಯವನ್ನೇ ಮಾಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಧುರೀಣ ಡಾ.ಪ್ರಭಾಕರ ಭಟ್ ಕಲ್ಲಡ್ಕ ಪ್ರತಿಪಾದಿಸಿದರು.

ವಿಶ್ವ ಹಿಂದು ಪರಿಷತ್ ಬಜರಂಗ ದಳ ಉಪ್ಪಿನಂಗಡಿ ಪ್ರಖಂಡ ಆಶ್ರಯದಲ್ಲಿ, ಭಾನುವಾರ ರಾತ್ರಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರುಗಿದ, ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನದ ಅಂಗವಾಗಿ ಷಷ್ಠಿಪೂರ್ತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಹಿಂಪ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೃಷ್ಣಮೂರ್ತಿ ಅಡ್ಯಾರ್ ಪ್ರಸ್ತಾಪಿಸಿದರು. ಹಿರಿಯ ಕರಸೇವಕ, ಉದ್ಯಮಿ ವಾಸುದೇವ ಪ್ರಭು ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಬಜರಂಗದಳದ ಉಪ್ಪಿನಂಗಡಿ ಪ್ರಖಂಡ ಅಧ್ಯಕ್ಷ ಎಂ.ಸುದರ್ಶನ್ ಉಪಸ್ಥಿತರಿದ್ದರು.

ಅಯೋಧ್ಯಾ ಕರ ಸೇವೆಯಲ್ಲಿ ಭಾಗಿಯಾದ ವಿಹಿಂಪ ಕಾರ್ಯಕರ್ತರು, ಮಾಜಿ ಯೋಧರು, ಸಾಮಾಜಿಕ ಕಾರ್ಯಕರ್ತರನ್ನು ಗೌರವಿಸಲಾಯಿತು. ಪ್ರಮುಖರಾದ ರವೀಂದ್ರ ಆಚಾರ್ಯ, ಉಮೇಶ್ ಶೆಣೈ, ಸವಿತಾ ಪಿ.ಜಿ.ಭಟ್, ಹರಿರಾಮಚಂದ್ರ, ಸಂಜೀವ ಮಠಂದೂರು, ಪ್ರಕಾಶ್ ಅಶ್ವಿನಿ, ಯು.ರಾಮ, ವೆಂಕಪ್ಪ ಗೌಡ, ಸುಜೀರ್ ಗಣಪತಿ ನಾಯಕ್, ಮುಕುಂದ ಬಜತ್ತೂರು, ಯತೀಶ್ ಶೆಟ್ಟಿ, ವಿಶ್ವನಾಥ್ ಶೆಣೈ, ಅಪ್ಪಯ್ಯ ನಾಯಕ್, ಜಯಂತ ಪುರೋಳಿ, ಪ್ರಸಾದ್ ಪಚ್ಚಾಡಿ, ಕಿಶೋರ್, ಮಹೇಶ್ ಬಜತ್ತೂರು, ಪವನ್, ಹರೀಶ್ ಶೆಟ್ಟಿ, ಮತ್ತಿತರರು ಭಾಗವಹಿಸಿದ್ದರು. ರಾಜಶೇಖರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ಸಂತೋಷ್ ಕರ್ಲಾಪು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net