

ಹುಮನಾಬಾದ್ : ಏಳನೇ ವೇತನ ಆಯೋಗದ ವರದಿ ಯಥಾವತ್ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಿಎಂಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ಗೆ ಸಲ್ಲಿಸಲಾಯಿತು.
ರಾಜ್ಯದಲ್ಲಿ ೨.೬೦ ಲಕ್ಷ ಹುದ್ದೆ ಖಾಲಿಯಿದ್ದರೂ ಸರ್ಕಾರದ ಯೋಜನೆಗಳ ಲಾಭ ಶ್ರೀಸಾಮಾನ್ಯರಿಗೆ ತಲುಪಿಸುವುದರ ಜತೆಗೆ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆ ಹಾಗೂ ಜಿಎಸ್ಟಿ ಸಂಗ್ರಹಣೆಯಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಇಂತಹ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಎಂದು ಸಂಘದ ತಾಲೂಕು ಅಧ್ಯಕ್ಷ ನಾಗಶೆಟ್ಟಿ ಡುಮಣೆ ಹೇಳಿದರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರೇವಣಸಿದ್ದಯ್ಯ ಮಠಪತಿ, ಪ್ರಮುಖರಾದ ಮಾಣಿಕ ನಾಗನೈಕ್, ಸಂಗಮೇಶ ಜಮಗಿ, ಮಲ್ಲಿಕಾರ್ಜುನ ಸಂಗಮಕರ್, ಶಿವಕುಮಾರ ಕಂಪ್ಲಿ, ಈಶ್ವರ ತಡೋಳಾ, ದಯಾನಂದ ತಡೋಳಾ, ಶರಣಪ್ಪ ದಂಡೆ, ಲಕ್ಷ್ಮಣಸಿಂಗ್, ವಿಠ್ಠಲರಾವ, ದಿಗಂಬರ, ಅಲೀಮ್ ಜಾಮದಾರ, ಓಂಕಾರ ಪಾಟೀಲ್, ಸಿದ್ದು ಕಲ್ಲೂರ ಇತರರಿದ್ದರು.
ತಮ್ಮ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಅವರಿಗೂ ಮನವಿಪತ್ರ ಸಲ್ಲಿಸಲಾಯಿತು.