

ಸರ್ಜಾಪುರ: ವಿಜಯವಾಣಿ ವಿದ್ಯಾರ್ಥಿ ಮತ್ತು ಉದ್ಯೋಗ ಮಿತ್ರ ಪತ್ರಿಕೆಯು ಜ್ಞಾನದ ಕಣಜವಾಗಿದ್ದು, 2021ರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಸ್.ಎಂ ಶ್ರೀನಿವಾಸ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಇಂದಿಗೂ ಅದನ್ನು ಮುಂದುವರೆಸಲಾಗುತ್ತಿದೆ ಎಂದು ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಾ.ಎನ್.ಕಲಾವತಿ ಹೇಳಿದರು.
ಸರ್ಜಾಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರೌಢಶಾಲೆ ಮತ್ತು ಸರ್ಕಾರಿ ಫ್ರೌಢ ಶಾಲೆಯ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಪಂಚಾಯಿತಿ ವತಿಯಿಂದ ವಿಜಯವಾಣಿ ವಿದ್ಯಾರ್ಥಿ ಮತ್ತು ಉದ್ಯೋಗ ಮಿತ್ರ ಪತ್ರಿಕೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಡವನಾಗಿ ಹುಟ್ಟಿರುವುದು ನಮ್ಮ ತಪ್ಪಲ್ಲ ಬದಲಾಗಿ ಬಡವನಾಗಿಯೇ ಸಾಯುವುದು ನಮ್ಮ ತಪ್ಪಾಗಿದ್ದು. ಸರ್ಕಾರಿ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಮಾಧ್ಯಮ ವರ್ಗದ ಕುಟುಂಬದ ಹಿನ್ನೆಲೆಯುವರಾಗಿದ್ದು, ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಶ್ರಮ ಪಡುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ವಿಜಯವಾಣಿ ವಿದ್ಯಾರ್ಥಿ ಮಿತ್ರ ಉತ್ತಮ ಜ್ಞಾನ ನೀಡಲಿದೆ ಎಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ವಿ ಶ್ರೀನಿವಾಸ್ ಬುಡಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಿನಿಮಾಗೆ ತೋರುವ ಆಸಕ್ತಿಯನ್ನು ಪಾಠ ಪ್ರವಚನದ ಕಡೆ ಹರಿಸಿದರೆ ಶೈಕ್ಷಣಿಕ ಸಾಧನೆ ಮಾಡಬಹುದಾಗಿದೆ ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಜಾಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಸತೀಶ್ ಕುಮಾರ್, ಮಾಜಿ ಅಧ್ಯಕ್ಷರಾದ ಮಮತಾ ರಮೇಶ್, ಸದಸ್ಯರಾದ ಲಲಿತಮ್ಮ, ಗಾಯಿತ್ರಿ ಪಸ್ರಾದ್, ಆರ್.ಕಿಟಕಿ ಶ್ರೀನಿವಾಸ್, ಅಭಿವೃದ್ಧಿ ಅಧಿಕಾರಿಗಳಾದ ಸುಭಾನ್ ಖಾನ್, ಕಾರ್ಯದರ್ಶಿ ನಂಜಾ ರೆಡ್ಡಿ, ಲೆಕ್ಕಾಧಿಕಾರಿ ಸೋಮಶೇಖರ್, ಕರವಸೂಲಿಗಾರರಾದ ಮುನಿರಾಜು, ಲಕ್ಷ್ಮಣ್, ಅಬ್ಬಯ್ಯ, ಸಂತೋಷ್, ಸರ್ಕಾರಿ ಪೌಢ ಶಾಲೆಯ ಶಿಕ್ಷಕರಾದ ರಮಾಮಣಿ, ಕೆ.ಶೈಲಜಾ, ಬಿ.ಎಂ. ಜ್ಯೋತಿ, ಹರೀಶ್, ನಿರ್ಮಲ, ಶಿವಶಂಕರ, ಲಿಂಗಾರಾಜು, ರಾಜೇಶ್ ಮತ್ತಿತ್ತರರು ಹಾಜರಿದ್ದರು.