ಸರಣಿಯ ಎರಡನೇ ಪಂದ್ಯ ಆರಂಭಕ್ಕೂ ಮುನ್ನ ತಂಡದಿಂದ ಮೂವರು ಆಟಗಾರರು ರಿಲೀಸ್​; BCCI ನೀಡಿದ ಕಾರಣ ಹೀಗಿದೆ

Team India
Published on

ಮುಂಬೈ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯಕ್ಕೆ ಆಯ್ಕೆಯಾಗಿದ್ದರು ತಂಡ ಕೂಡಿಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದ ಯುವ ಆಟಗಾರರಾದ ಧ್ರುವ್​ ಜುರೆಲ್​, ಯಶ್​ ದಯಾಳ್​ ಹಾಗೂ ಸರ್ಫರಾಜ್​ ಖಾನ್​ ಇದೀಗ ಸರಣಿಯ ಎರಡನೇ ಪಂದ್ಯಕ್ಕೂ ತಂಡ ಕೂಡಿಕೊಳ್ಳುವುದಿಲ್ಲ ಎಂಬ ವಿಚಾರ ಹೊರಬಿದ್ದಿದ್ದು, ಈ ವಿಚಾರವನ್ನು ಬಿಸಿಸಿಐ ಖಚಿತಪಡಿಸಿದೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಸರ್ಫರಾಝ್ ಖಾನ್, ಧ್ರುವ್ ಜುರೇಲ್ ಹಾಗೂ ಯಶ್ ದಯಾಳ್ ಅವರನ್ನು ಭಾರತ ತಂಡದಿಂದ ಹೊರಬರಲಿದ್ದಾರೆ. ಈ ಮೂವರು ಆಟಗಾರರು ಮುಂಬರುವ ಇರಾನಿ ಕಪ್ ಪಂದ್ಯಕ್ಕೆ ಆಯ್ಕೆಯಾಗಿದ್ದು, ಹೀಗಾಗಿ ಇವರನ್ನು ಟೀಮ್ ಇಂಡಿಯಾದಿಂದ ರಿಲೀಸ್ ಮಾಡಲಾಗುತ್ತಿದೆ. ಅಕ್ಟೋಬರ್ 1 ರಿಂದ ಶುರುವಾಗಲಿರುವ ಇರಾನಿ ಕಪ್​ನಲ್ಲಿ ಈ ಮೂವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

Dhruv Dayal Khan

ಬಾಂಗ್ಲಾದೇಶ ವಿರುದ್ಧ ದ ಮೊಲದ ಪಂದ್ಯದಲ್ಲೂ ಈ ಮೂವರು ಆಟಗಾರರಿಗೆ ಮಣೆ ಹಾಕಿರಲಿಲ್ಲ. ಹೀಗಾಗಿ ಅವರು ಬೆಂಚ್​ ಕಾಯಬೇಕಾಗಿ ಬಂತು. ಸರಣಿಯ ಎರಡನೇ ಪಂದ್ಯದಲ್ಲೂ ಚಾನ್ಸ್​ ಸಿಗುವುದು ಡೌಟ್​ ಎಂದು ಹೇಳಲಾಗಿದ್ದು, ಹೀಗಾಗಿ ಈ ಮೂವರು ಆಟಗಾರರನ್ನು ಇರಾನಿ ಕಪ್​ಗೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಉನ್ನತ ಸುದ್ದಿ ಮೂಲಗಳು ತಿಳಿಸಿದೆ.

ಸರಣಿಯ ಎರಡನೇ ಪಂದ್ಯವು ಸೆಪ್ಟೆಂಬರ್​ 27ರಿಂದ ಕಾನ್ಪುರದಲ್ಲಿ ಆರಂಭವಾಗಲಿದ್ದು, ಅಕ್ಟೋಬರ್​ 01ರಿಂದ ಇರಾನಿ ಕಪ್​ ಆರಂಭವಾಗಲಿದೆ. ಒಂದು ವೇಳೆ ಈ ಮೂವರು ಆಟಗಾರರು ಟೀಮ್​ ಇಂಡಿಯಾದಲ್ಲಿ ಸ್ತಾನ ಪಡೆದರೆ ಆಗ ಇರಾನಿ ಕಪ್​ನಲ್ಲಿ ಭಾಗಿಯಾಗಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಹೀಗಾಗಿ ಸೆಪ್ಟೆಂಬರ್ ಅಂತ್ಯದೊಳಗೆ ಈ ಮೂವರು ಇರಾನಿ ಕಪ್​ ತಂಡಗಳನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net